ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಗಂಗಾನದಿ ತಟದಲ್ಲಿ ಮಹಾಕುಂಭ ಮೇಳ ಆಯೋಜಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿರುವ ದಕ್ಷಿಣಾ ಆಫ್ರಿಕಾದ ಭಕ್ತರೊಬ್ಬರು ಮಹಾಕುಂಭ ಮೇಳದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಸೌಂದರ್ಯವಾಗಿದೆ. ರಸ್ತೆಗಳು ಸ್ವಚ್ಚವಾಗಿವೆ, ಜನರು ಬಹಳ ಸ್ನೇಹಪರರಾಗಿದ್ದು, ಸಂತೋಷವಾಗಿದ್ದಾರೆ. ನಾವು ಸನಾತನ ಧರ್ಮವನ್ನು ಆಚರಿಸುತ್ತೇವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಹಾಕುಂಭ ಮೇಳದಲ್ಲಿ 15 ಲಕ್ಷಕ್ಕೂ ಹೆಚ್ಚು ವಿದೇಶಿಯರು ಭಾಗವಹಿಸುವ ನೀರಿಕ್ಷೆ ಇದೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.