ನವದೆಹಲಿ: ‘ಲೋಕಸಭೆಯಲ್ಲಿ ಬಹುಶಃ ಕೊನೆಯದಾಗಿ ಮಾತನಾಡಬಹುದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ತಿಳಿಸಿ ಮನವಿ ಮಾಡಿಕೊಂಡರೂ ಭಾಷಣಕ್ಕೆ ಹೆಚ್ಚಿನ ಅವಕಾಶ ನೀಡದೆ, ಬರೀ 5 ನಿಮಿಷಕ್ಕೇ ಮಾತು ಮುಗಿಸುವಂತೆ ಸೂಚಿಸಿದ್ದು ನನಗೆ ತೀವ್ರ ನೋವುಂಟು ಮಾಡಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಳಲು ತೋಡಿಕೊಂಡರು.

ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಲು ಗುರುವಾರ ಅವಕಾಶ ನೀಡಿದ್ದ ಸ್ಪೀಕರ್, 5 ನಿಮಿಷದೊಳಗೇ ಮಾತಿಗೆ ವಿರಾಮ ಹೇಳುವಂತೆ ಸೂಚಿಸಿದರು. ಮಾತನಾಡಲು ಅವಕಾಶ ನೀಡುವಂತೆ ಇಂದೂ ಕೋರಿದ್ದೆ. ಆದರೂ ಅವರು ಅವಕಾಶ ನಿರಾಕರಿಸಿದರು ಎಂದು ಸುದ್ದಿಗಾರರೆದುರು ನೋವು ತೋಡಿಕೊಂಡರು.

‘ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಬಗ್ಗೆ ವ್ಯಂಗ್ಯವಾಡಿದರು. ಜೆಡಿಎಸ್– ಕಾಂಗ್ರೆಸ್ ನೇತೃತ್ವದ ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲವನ್ನು ಸಮರ್ಪಕವಾಗಿ ಮನ್ನಾ ಮಾಡಿಲ್ಲ ಎಂದು ಟೀಕಿಸಿದರು. ಆದರೆ, ಅವರು ಆ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಪ್ರತಿ
ಕ್ರಿಯೆ ನೀಡಲೆಂದೇ ಸಮಯ ಕೋರಿದ್ದೆ. ಆದರೆ ಅವಕಾಶ ಸಿಗಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.