ಮುಂಬೈ: ಎನ್ಸಿಪಿಯ ಶಾಸಕಾಂಗ ಪಕ್ಷದ ಸಭೆ ಜನವರಿ 31ರಂದು ನಡೆಯಲಿದ್ದು, ದಿವಂಗತ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಘೋಷಿಸಲಾಗುವುದು ಎಂದು ಮಹಾರಾಷ್ಟ್ರದ ಸಚಿವ ಛಗನ್ ಭುಜಬಲ್ ಶುಕ್ರವಾರ ಹೇಳಿದರು.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕಾಂಗ ಪಕ್ಷದ ಸಭೆಯಲ್ಲಿ ಸುನೇತ್ರಾ ಅವರನ್ನು ನಾಯಕಿಯಾಗಿ ಘೋಷಿಸಿದ ಬಳಿಕ ಶನಿವಾರವೇ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಅಭ್ಯಂತರ ಇಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ’ ಎಂದರು.

ಸುನೇತ್ರಾ ಅವರು ಮಹಾರಾಷ್ಟ್ರ ಶಾಸಕಾಂಗದ ಎರಡೂ ಸದನಗಳ ಸದಸ್ಯರಲ್ಲ. ಪ್ರಸ್ತುತ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಅಜಿತ್ ಪವಾರ್ ನಿಧನದ ಕಾರಣ ಪುಣೆ ಜಿಲ್ಲೆಯ ಬಾರಾಮತಿ ವಿಧಾನಸಭಾ ಸ್ಥಾನ ತೆರವಾಗಿದೆ.

‘ಎನ್ಸಿಪಿಯ ಶಾಸಕಾಂಗ ಪಕ್ಷದ ಸಭೆಯನ್ನು ಶನಿವಾರ ಕರೆಯಲಾಗುವುದು. ಅಲ್ಲಿ ಸುನೇತ್ರಾ ಅವರನ್ನು ನಾಯಕಿ ಎಂದು ಘೋಷಿಸಲಾಗುವುದು. ಅವರು ಉಪ ಮುಖ್ಯಮಂತ್ರಿಯಾಗಬೇಕೆಂದು ಪಕ್ಷದ ಹಲವು ನಾಯಕರು ಬಯಸುತ್ತಾರೆ’ ಎಂದು ಭುಜಬಲ್ ಹೇಳಿದರು.

ಎನ್ಸಿಪಿ ಮುಖಂಡರಿಂದ ಫಡಣವೀಸ್ ಭೇಟಿ: ಎನ್ಸಿಪಿಯ ಹಿರಿಯ ನಾಯಕರು ಶುಕ್ರವಾರ ದೇವೇಂದ್ರ ಫಡಣವೀಸ್ ಅವರನ್ನು ಭೇಟಿಯಾದರು. ದಕ್ಷಿಣ ಮುಂಬೈನಲ್ಲಿರುವ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಸುಮಾರು ಒಂದೂವರೆ ಗಂಟೆ ನಡೆದ ಸಭೆಯಲ್ಲಿ ಛಗನ್ ಭುಜಬಲ್, ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯಾಧ್ಯಕ್ಷ ಸುನಿಲ್ ತಟ್ಕರೆ ಮತ್ತು ಮಾಜಿ ಸಚಿವ ಧನಂಜಯ ಮುಂಡೆ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದರು ಎಂದು ಮೂಲಗಳು ತಿಳಿಸಿವೆ.

ಸಿಐಡಿ ತನಿಖೆ ಆರಂಭ: ಅಜಿತ್ ಪವಾರ್ ಮತ್ತು ಇತರ ನಾಲ್ವರ ಸಾವಿಗೆ ಕಾರಣವಾದ ವಿಮಾನ ಅಪಘಾತದ ಕುರಿತು ಮಹಾರಾಷ್ಟ್ರ ಅಪರಾಧ ತನಿಖಾ ದಳ (ಸಿಐಡಿ) ತನಿಖೆ ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಜನವರಿ 28ರ ದುರಂತದ ಬಳಿಕ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ದಾಖಲಾಗಿರುವ ಆಕಸ್ಮಿಕ ಸಾವು ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ರಾಜ್ಯ ಪೊಲೀಸರು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.

ಅಜಿತ್ ಪವಾರ್ (66) ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಲಘು ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು.

ಅಸ್ಥಿ ವಿಸರ್ಜನೆ (ಪುಣೆ ವರದಿ): ಅಜಿತ್ ಪವಾರ್ ಅವರ ಚಿತಾಭಸ್ಮವನ್ನು ಹುಟ್ಟೂರಾದ ಬಾರಾಮತಿ ಬಳಿ ನೀರಾ ಮತ್ತು ಕರ್ಹಾ ನದಿಗಳ ಸಂಗಮದಲ್ಲಿ ಅವರ ಹಿರಿಯ ಪುತ್ರ ಪಾರ್ಥ್ ಶುಕ್ರವಾರ ವಿಸರ್ಜಿಸಿದರು.

ಅಜಿತ್ ಪವಾರ್ ಅವರ ಉತ್ತರಾಧಿಕಾರಿ ಬಗ್ಗೆ ಈಗಲೇ ಏಕೆ ಮಾತನಾಡಬೇಕು. ಈ ವಿಷಯವನ್ನು ಯಾರೇ ಪ್ರಸ್ತಾಪಿಸಲಿ ಅವರಿಗೆ ಮಾನವೀಯತೆ ಇಲ್ಲ
ಸಂಜಯ್ ರಾವುತ್ ಶಿವಸೇನಾ (ಯುಬಿಟಿ) ರಾಜ್ಯಸಭಾ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.