ನಮ್ಮ ಭೂಮಿ ಒಂದು ಜೀವಂತ ಆಕಾಶಕಾಯ. ಪೃಥ್ವಿ ಕೇವಲ ಕಲ್ಲುಬಂಡೆಗಳಿಂದ ಕೂಡಿದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಅದು ಚಲನಶೀಲ. ಇಲ್ಲಿನ ಋತುಗಳಲ್ಲಿ, ಬಣ್ಣಬಣ್ಣದ ಪಾಚಿಗಳಿಂದಾಗಿ ಸಾಗರದಲ್ಲಿ ಕಂಡುಬರುವ ಬದಲಾವಣೆಗಳನ್ನು ನಾನು ಅಂತರಿಕ್ಷದಿಂದ ನೋಡಿರುವೆ. ಉತ್ತರ ಗೋಳಾರ್ಧ ಅಥವಾ ದಕ್ಷಿಣದ ಅಂಟಾರ್ಕ್ಟಿಕಾದಲ್ಲಿ ಹಿಮಗಡ್ಡೆಗಳು ರೂಪುಗೊಳ್ಳುವುದನ್ನೂ ಕಣ್ತುಂಬಿಕೊಂಡಿರುವೆ.