ನವದೆಹಲಿ: ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಹೆಚ್ಚುತ್ತದೆ ಹಾಗಾಗಿ ದೇಶದಾದ್ಯಂತ ಪಟಾಕಿಗೆ ನಿಷೇಧ ಹೇರಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಪಟಾಕಿ ಮಾರಾಟಕ್ಕೆ ನಿಷೇಧ ಹೇರಲು ಸಾಧ್ಯವಿಲ್ಲ ಆದರೆ ಕಡಿಮೆ ಮಾಲಿನ್ಯವುಂಟು ಮಾಡುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಎ.ಕೆ ಸಿಖ್ರಿ ಮತ್ತು ಅಶೋಕ್ ಭೂಷಣ್ ಅವರ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿದ್ದು ಪಟಾಕಿಗಳ ಆನ್‍ಲೈನ್ ಮಾರಾಟಕ್ಕೆ ನಿಷೇಧ ವಿಧಿಸಿದ್ದಾರೆ.

ದೀಪಾವಳಿ ಹಬ್ಬದವೇಳೆ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಪಟಾಕಿ ಸಿಡಿಸಬಹುದು. ಅದೇ ವೇಳೆ ಹೊಸವರ್ಷ ಮತ್ತು ಕ್ರಿಸ್ಮಸ್ ಹಬ್ಬದ ವೇಳೆ ರಾತ್ರಿ11.45 ಮತ್ತು 12.30ರ ವರೆಗೆ ಪಟಾಕಿ ಸಿಡಿಸಬಹುದಾಗಿದೆ. ಪರವಾನಗಿ ಹೊಂದಿರುವ ಮಾರಾಟಗಾರರಿಗೆ ಮಾತ್ರ ಪಟಾಕಿ ಮಾರುವ ಅವಕಾಶವಿದೆ.

ಸಂವಿಧಾನದ ಸೆಕ್ಷನ್ 21 ಪ್ರಕಾರ ಪಟಾಕಿ ನಿರ್ಮಾಣ ಕಂಪನಿಯ ನೌಕರರ ಜೀವನೋಪಾಯ ಮತ್ತು ಹಕ್ಕುಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.