ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಶಂಕಿತ ಡ್ರಗ್ ಸರಬರಾಜುದಾರನೊಬ್ಬನನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಬಸಿತ್ ಪರಿಹರ್ ಜೊತೆ ಈತನಿಗೆ ಸಂಪರ್ಕವಿತ್ತು ಎನ್ನಲಾಗಿದ್ದು, ಆತನ ಗುರುತನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಡಗ್ರ್ ಪ್ರಕರಣದಲ್ಲಿ ಮತ್ತೋರ್ವ ಡ್ರಗ್ ಡೀಲರ್ 21 ವರ್ಷದ ಜಯೀದ್ ವಿಲಾತ್ರ ಎಂಬಾತನನ್ನು ಬುಧವಾರವಷ್ಟೇ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಜಯೀದ್‌ನನ್ನು ಸೆ.9ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿ ಸ್ಥಳೀಯ ನ್ಯಾಯಾಲಯವೊಂದು ಗುರುವಾರ ಆದೇಶಿಸಿದೆ.

ಜಯೀದ್ ವಿಚಾರಣೆ ನಂತರ ಬಾಂದ್ರಾ ನಿವಾಸಿ ಪರಿಹರ್‌ನನ್ನು ಅಧಿಕಾರಿಗಳು ಬಂಧಿಸಿದ್ದರು. ನಟಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾಗಿರುವ ಡ್ರಗ್ ಪ್ರಕರಣದಲ್ಲಿ ಪರಿಹರ್ ಭಾಗಿಯಾಗಿರುವ ಶಂಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.