ಹರಿದ್ವಾರ: ಗಂಗಾ ಉಳಿವಿಗಾಗಿ ಪಣತೊಟ್ಟು ಸತತ 194 ದಿನಗಳಿಂದ ಹರಿದ್ವಾರದಲ್ಲಿ ಉಪವಾಸ ಕೈಗೊಂಡಿದ್ದ ಸ್ವಾಮಿ ಆತ್ಮಾಬೋಧಾನಂದ ಅವರು ಭಾನುವಾರ ಉಪವಾಸ ಕೊನೆಗೊಳಿಸಿದ್ದಾರೆ.

ಗಂಗಾನದಿ ಸ್ವಚ್ಛತೆ ರಾಷ್ಟ್ರೀಯ ಅಭಿಯಾನದ (ಎನ್‌ಎಂಸಿಜಿ) ಕಾರ್ಯಕಾರಿ ಸಮಿತಿಯಿಂದ ಲಿಖಿತ ಭರವಸೆ ಪಡೆದುಕೊಂಡ ಬಳಿಕ ಹಣ್ಣಿನ ರಸ ಸೇವಿಸುವುದರ ಮೂಲಕ ಉಪವಾಸ ಕೈಬಿಟ್ಟಿದ್ದಾರೆ.

ಎನ್‌ಎಂಸಿಜಿಯ ನಿರ್ದೇಶಕ ರಾಜೀವ್ ರಂಜನ್ ಅವರನ್ನು ಏ.25ರಂದು ಭೇಟಿ ಮಾಡಿದ ವೇಳೆ ಅಣೆಕಟ್ಟು ನಿರ್ಮಾಣ, ನದಿಗಳ ಉಳಿವು, ಗಣಿಗಾರಿಕೆ ಹೀಗೆ ಇನ್ನಿತರೆ ವಿಚಾರಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಲಿಖಿತ ಪತ್ರ ನೀಡಿದ್ದೆ ಎಂದು ಬೋಧಾನಂದ ಹೇಳಿದ್ದಾರೆ.

ಸರ್ಕಾರ ಹಾಗೂ ಎನ್‌ಎಂಸಿಜಿ ಸಮಿತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದ ಬಳಿಕ ಉಪವಾಸ ಕೈಬಿಟ್ಟಿದ್ದೇನೆ ಎಂದು ಹೇಳಿದರು.

ಈ ವೇಳೆ ಹರಿದ್ವಾರದ ಉಪವಿಭಾಗಧಿಕಾರಿ ಕುಸುಮ್ ಚೌಹಾಣ್ ಹಾಗೂ ಮತ್ತಿತರರು ಇದ್ದರು.

ಇದನ್ನೂ ಓದಿ: ಗಂಗೆಯನ್ನು ಕಟ್ಟಿ ಹಾಕುವಿರೇಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.