ಚೆನ್ನೈ: ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಜಾರಿಯಲ್ಲಿರುವ 'ಕೋವಿಡ್–19 ಲಾಕ್‌ಡೌನ್' ಅವಧಿಯನ್ನು ತಮಿಳುನಾಡು ಸರ್ಕಾರ ಮತ್ತೊಂದು ವಾರ ವಿಸ್ತರಿಸಿದೆ.

ಲಾಕ್‌ಡೌನ್ ನಿಯಮಗಳನ್ನು ಮತ್ತಷ್ಟು ಸಡಿಲಿಸಲಾಗಿದ್ದು, ಜುಲೈ 12ರ ವರೆಗೂ ನಿರ್ಬಂಧಗಳು ಮುಂದುವರಿಯಲಿವೆ. ಅಂಗಡಿಗಳಲ್ಲಿ ವ್ಯಾಪಾರ ಹಾಗೂ ಇತರೆ ಚಟುವಟಿಕೆಗಳನ್ನು ರಾತ್ರಿ 8ರ ವರೆಗೂ ಮುಂದುವರಿಸಬಹುದಾಗಿದೆ.

ಹೊಟೇಲ್‌ಗಳು ಮತ್ತು ಚಹಾದ ಅಂಗಡಿಗಳಲ್ಲಿ ಶೇ 50ರಷ್ಟು ಗ್ರಾಹಕರ ಪ್ರವೇಶಕ್ಕೆ ಅವಕಾಶ ನೀಡಬಹುದಾಗಿದೆ. ಅಂತರ್‌ಜಿಲ್ಲೆ ಮತ್ತು ಜಿಲ್ಲೆಯ ಒಳಗಡೆ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಒಟ್ಟು ಆಸನದ ಸಾಮರ್ಥ್ಯದ ಶೇ 50ರಷ್ಟು ಜನರು ಪ್ರಯಾಣಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶುಕ್ರವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್–19 ದೃಢಪಟ್ಟ 4,230 ಹೊಸ ಪ್ರಕರಣಗಳು ತಮಿಳುನಾಡಿನಲ್ಲಿ ದಾಖಲಾಗಿವೆ. ಇದೇ ಅವಧಿಯಲ್ಲಿ ಸೋಂಕಿನಿಂದ 97 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 36,707 ಪ್ರಕರಣಗಳು ಸಕ್ರಿಯವಾಗಿವೆ. ಮೇ 21ರಂದು 24 ಗಂಟೆಗಳಲ್ಲಿ 36,184 ಪ್ರಕರಣಗಳು ದಾಖಲಾಗಿತ್ತು, ಮುಂದೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.