ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ಹೆದ್ದಾರಿಯಲ್ಲಿ 551 ಬ್ಲಾಕ್‌ ಸ್ಪಾಟ್‌ ಗುರುತು- ಕೇಂದ್ರ ಸರ್ಕಾರ

Published 21 ಡಿಸೆಂಬರ್ 2023, 14:34 IST
Last Updated 21 ಡಿಸೆಂಬರ್ 2023, 14:34 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿಹೆಚ್ಚು ಅಪಘಾತ ಸಂಭವಿಸುವ 5,803 ಬ್ಲಾಕ್‌ ಸ್ಪಾಟ್‌ಗಳನ್ನು (ಅಪಘಾತ ವಲಯ) ಗುರುತಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಗುರುವಾರ ಲೋಕಸಭೆಗೆ ತಿಳಿಸಿದೆ.

2018ರಿಂದ 2020ರವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಿರುವ ಅಂಕಿ–ಅಂಶ ಆಧರಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಅವರು, ಸಂಸತ್‌ನ ಕೆಳಮನೆಗೆ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. 

ತಮಿಳುನಾಡಿನಲ್ಲಿ ಅತಿಹೆಚ್ಚು ಅಂದರೆ 748 ಬ್ಲಾಕ್‌ ಸ್ಪಾಟ್‌ಗಳಿವೆ. ಉಳಿದಂತೆ ಪಶ್ಚಿಮ ಬಂಗಾಳ 701, ತೆಲಂಗಾಣದಲ್ಲಿ 485 ಇವೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ 551 ಬ್ಲಾಕ್‌ ಸ್ಪಾಟ್‌ಗಳಿವೆ. ಈ ಪೈಕಿ 367 ಬ್ಲಾಕ್‌ ಸ್ಪಾಟ್‌ಗಳನ್ನು ಸಂಚಾರಕ್ಕೆ ಸುರಕ್ಷಿತ ಸ್ಥಳಗಳನ್ನಾಗಿ ದುರಸ್ತಿಪಡಿಸಲಾಗಿದೆ. 2018ರಿಂದ 2020ರವರೆಗೆ ಈ ಸ್ಥಳಗಳಲ್ಲಿ ಸಂಭವಿಸಿದ ಅಪಘಾತದಲ್ಲಿ 4,110 ಮಂದಿ ಮೃತಪಟ್ಟಿದ್ದು, 1,694 ಮಂದಿ ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ದೇಶದಲ್ಲಿ ಗುರುತಿಸಿರುವ ಬ್ಲಾಕ್‌ ಸ್ಪಾಟ್‌ಗಳ ದುರಸ್ತಿ ಮತ್ತು ನಿರ್ವಹಣೆಗೆ ಕೇಂದ್ರವು ಅಗತ್ಯ ಕ್ರಮವಹಿಸಿದೆ. 2018–19ರಿಂದ 2022–23ರ ವರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಒಟ್ಟು ₹15,702.80 ಕೋಟಿ ವ್ಯಯಿಸಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT