ನವದೆಹಲಿ: ತಂತ್ರಜ್ಞಾನವು ಎರಡು ಅಲಗಿನ ಕತ್ತಿಯಂತೆ. ಹೊಸ ಆವಿಷ್ಕಾರವು ನ್ಯಾಯಾಂಗದ ಕಾರ್ಯವಿಧಾನವನ್ನು ಉತ್ತಮಪಡಿಸಬೇಕೇ ಹೊರತು; ನ್ಯಾಯಾಂಗದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನೇ ಅದು ಬದಲಿಸುವಂತಾಗಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಅಭಿಪ್ರಾಯಪಟ್ಟರು.

ಕೇಂಬ್ರಿಜ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ‘ನ್ಯಾಯಾಂಗದ ಸುಧಾರಣೆಯಲ್ಲಿ ತಂತ್ರಜ್ಞಾನದ ಪಾತ್ರ’ ಕುರಿತ ಅಂತರರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಸ್ತಾರ, ವೈವಿಧ್ಯವನ್ನು ಹೊಂದಿರುವ ಮತ್ತು ಸಂಕೀರ್ಣವಾದ ಭಾರತದಂತಹ ದೇಶಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಯಲ್ಲಿ ತಂತ್ರಜ್ಞಾನವು ಮಹತ್ವದ ಪಾತ್ರ ವಹಿಸುತ್ತದೆ’ ಎಂದರು.

‘ತಂತ್ರಜ್ಞಾನವು ಎರಡು ಅಲಗಿನ ಕತ್ತಿಯಂತೆ ಕಾರ್ಯನಿರ್ವಹಿಸಬಹುದು ಎಂಬ ಬಗ್ಗೆ ನಮಗೆ ಅರಿವಿರಬೇಕು. ಇದು ಅಸಮಾನವಾದ ವಿಭಜನೆಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ‘ಡಿಜಿಟಲ್ ವಿಭಜನೆ’ಗೆ ಕಾರಣವಾಗಬಹುದು. ಅಂದರೆ ಇಂಟರ್ನೆಟ್ ಸಂಪರ್ಕ, ಸಾಧನಗಳು ಮತ್ತು ಡಿಜಿಟಲ್ ಸಾಕ್ಷರತೆಯ ಅಸಮಾನ ಹಂಚಿಕೆಯು ಈಗಾಗಲೇ ನ್ಯಾಯವನ್ನು ಪಡೆಯಲು ಅಡೆತಡೆಗಳನ್ನು ಎದುರಿಸುತ್ತಿರುವ ದುರ್ಬಲ ಸಮುದಾಯಗಳನ್ನು ಮತ್ತಷ್ಟು ಪ್ರತ್ಯೇಕವಾಗಿಡಲು ಕಾರಣವಾಗಬಹುದು’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.