ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ತೇಜಸ್ವಿಯೇ ಚಾಲಕ: ರಾಹುಲ್‌ ಗಾಂಧಿ

Published 16 ಫೆಬ್ರುವರಿ 2024, 12:30 IST
Last Updated 16 ಫೆಬ್ರುವರಿ 2024, 12:30 IST
ಅಕ್ಷರ ಗಾತ್ರ

ಸಸರಾಂ: ಬಿಹಾರದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಡ್ರೈವಿಂಗ್‌ ಸೀಟಿನಲ್ಲಿ ಇರಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶುಕ್ರವಾರ ಹೇಳಿದರು.

ಬಿಹಾರದಲ್ಲಿ ಎರಡು ಹಂತಗಳಲ್ಲಿ ಐದು ದಿನಗಳನ್ನು ಕಳೆದಿರುವ ’ಭಾರತ್‌ ಜೋಡೊ ನ್ಯಾಯ ಯಾತ್ರೆ‘ಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಅವರು ಭಾಗಿಯಾದರು. ಈ ವೇಳೆ ಇಬ್ಬರೂ ನಾಯಕರೂ ಪರಸ್ಪರ ಆಲಿಂಗಿಸಿದರು. ರೋಡ್‌ಶೋನಲ್ಲಿ ತನ್ನೊಂದಿಗೆ ಪಾಲ್ಗೊಂಡಿದ್ದ ತೇಜಸ್ವಿ ಅವರಿಗೆ, ಕಾರು ಚಲಾಯಿಸುವಂತೆ ರಾಹುಲ್‌ ತಿಳಿಸಿದರು. ಅದರಂತೆ ತೇಜಸ್ವಿ ಅವರು ಕಾರು ಚಲಾಯಿಸಿದರು.

ಯಾತ್ರೆಯ ಭಾಗವಾಗಿ ಇಬ್ಬರೂ ನಾಯಕರು ರೈತರ ಜತೆಗೆ ಸಂವಾದ ನಡೆಸಿದರು. ರಾಹುಲ್‌ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದರೆ, ಯಾದವ್‌ ಅವರು ಬಿಹಾರ ಸಿ.ಎಂ ನಿತೀಶ್‌ ಕುಮಾರ್‌ ವಿರುದ್ಧ ಹರಿಹಾಯ್ದರು. 

ಶಾಸಕರ ಸಂಖ್ಯೆ ಹೆಚ್ಚಿದ್ದಾಗ್ಯೂ ಮುಖ್ಯಮಂತ್ರಿ ಸ್ಥಾನವನ್ನು ಆರ್‌ಜೆಡಿ ‘ತ್ಯಾಗ’ ಮಾಡಿತ್ತು. ಆದರೂ ಜೆಡಿಯು ಅಧ್ಯಕ್ಷ ನಿತೀಶ್‌ ಅವರು ಮಹಾಘಟಬಂಧನ್‌ನಿಂದ ಹೊರ ನಡೆದರು ಎಂದು ತೇಜಸ್ವಿ ಹೇಳಿದಾಗ, ಜನ ಸಮೂಹದಿಂದ ‘ಪಲ್ಟೂರಾಮ್‌’ ಎಂಬ ಘೋಷಣೆಗಳು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT