ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಭ್ರಷ್ಟ ರಾಜಕಾರಣಿ: ಅಮಿತ್‌ ಶಾ

Published 20 ನವೆಂಬರ್ 2023, 11:30 IST
Last Updated 20 ನವೆಂಬರ್ 2023, 11:30 IST
ಅಕ್ಷರ ಗಾತ್ರ

ಹೈದಾರಬಾದ್‌: 'ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ದೇಶದ ಅತ್ಯಂತ ಭ್ರಷ್ಟ ರಾಜಕಾರಣಿ‘ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

‘ತೆಲಂಗಾಣ ಚುನಾವಣೆ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆಡಳಿತಾರೂಢ ಭಾರತ್‌ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಪಕ್ಷವು ಮದ್ಯ ಹಗರಣ, ಕಾಳೇಶ್ವರಂ ಯೋಜನೆ, ಹೈದರಾಬಾದ್‌ನ ಮಿಯಾಪುರ್‌ನಲ್ಲಿ ನಡೆಸಲಾದ ಭೂ ಅವ್ಯವಹಾರಗಳು ಸೇರಿದಂತೆ ವಿವಿಧ ಹಗರಣಗಳಲ್ಲಿ ಭಾಗಿಯಾಗಿದೆ‘ ಎಂದರು.

‘ಕೆ.ಸಿ ರಾವ್‌ ದೇಶದ ಅತ್ಯಂತ ಭ್ರಷ್ಟ ರಾಜಕಾರಣಿದ್ದು, ಅವರು ಭಾಗಿಯಾಗಿರುವ ಎಲ್ಲಾ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಸಲಾಗುವುದು. ಭ್ರಷ್ಟಚಾರದಲ್ಲಿ ತೊಡಗಿರುವವರನ್ನು ಬಿಜೆಪಿ ಜೈಲಿಗೆ ಕಳುಹಿಸುತ್ತದೆ‘ ಎಂದು ಅಮಿತ್‌ ಶಾ ಹೇಳಿದ್ದಾರೆ.

‘ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗುವುದು. ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಕಾಳೇಶ್ವರಂ ಮತ್ತು ಧರಣೆ ಯೋಜನೆಗಳಲ್ಲಿ ನಡೆಸಲಾದ ಹಗರಣ ಕುರಿತು ತನಿಖೆ ನಡೆಸಲಾಗವುದು. ಅಯೋಧ್ಯಾಯ ರಾಮಮಂದಿರಕ್ಕೆ ಉಚಿತವಾಗಿ ಪ್ರವಾಸ ಏರ್ಪಡಿಸಲಾಗುವುದು‘ ಎಂದು ಅಮಿತ್‌ ಶಾ ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT