ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣಕ್ಕೆ ಹೊಸ ರಾಜ್ಯ ಗೀತೆ: ಜೂ.2ಕ್ಕೆ ಬಿಡುಗಡೆ

Published 31 ಮೇ 2024, 2:46 IST
Last Updated 31 ಮೇ 2024, 2:46 IST
ಅಕ್ಷರ ಗಾತ್ರ

ಹೈದರಾಬಾದ್‌: ಖ್ಯಾತ ಕವಿ ಅಂದೇ ಶ್ರೀ ಬರೆದಿರುವ ‘ಜಯ ಜಯ ಹೇ ತೆಲಂಗಾಣ’ವನ್ನು ರಾಜ್ಯ ಗೀತೆಯಾಗಿ ತೆಲಂಗಾಣ ರಾಜ್ಯ ಸರ್ಕಾರ ಅನುಮೋದಿಸಿದೆ.

ಜೂನ್ 2 ರಂದು ರಾಜ್ಯ ರಚನೆಯ ದಿನದ ಅದ್ಧೂರಿ ಆಚರಣೆಯಲ್ಲಿ ರಾಜ್ಯ ಗೀತೆ ಬಿಡುಗಡೆಯಾಗಲಿದೆ ಎಂದು ಗುರುವಾರ ರಾತ್ರಿ ಹೊರಡಿಸಲಾದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂದೇ ಶ್ರೀ ಅವರು 20 ವರ್ಷಗಳ ಹಿಂದೆ ಬರೆದ ಗೀತೆಯನ್ನು ಯಾವುದೇ ಬದಲಾವಣೆಗಳಿಲ್ಲದೆ ರಾಜ್ಯಗೀತೆಯಾಗಿ ಸ್ವೀಕರಿಸಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಈ ಹಾಡಿಗೆ ಸಂಗೀತ ಸಂಯೋಜಿಸಿ ಹಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಗೀತೆಯನ್ನು ಎರಡು ಆವೃತ್ತಿಗಳಲ್ಲಿ ನಿರ್ಮಿಸಲಾಗಿದೆ. ಹಾಡಿನ ಮೊದಲ ಆವೃತ್ತಿಯು ಎರಡೂವರೆ ನಿಮಿಷಗಳವರೆಗೆ ಇರುತ್ತದೆ, ಎರಡನೇ ಆವೃತ್ತಿಯು ಪೂರ್ಣ ಹದಿಮೂರುವರೆ ನಿಮಿಷಗಳ ನಿರೂಪಣೆಯಾಗಿದೆ.

ಮೂರು ಚರಣಗಳನ್ನು ಹೊಂದಿರುವ ಚಿಕ್ಕ ಆವೃತ್ತಿಯನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ಲೇ ಮಾಡಲಾಗುವುದು. ಎರಡೂ ಆವೃತ್ತಿಗಳನ್ನು ರಾಜ್ಯ ಗೀತೆಗಳಾಗಿ ಪರಿಗಣಿಸಲಾಗುವುದು ಎಂದು ಸಿಎಂ ರೆಡ್ಡಿ ಘೋಷಿಸಿದ್ದಾರೆ.

ರಾಜ್ಯ ಲಾಂಛನದಿಂದ ಚಾರ್ಮಿನಾರ್ ಮತ್ತು ಕಾಕತೀಯ ರಾಜವಂಶದ ಕಮಾನುಗಳನ್ನು ತೆಗೆದುಹಾಕುವ ಸರ್ಕಾರದ ಕ್ರಮಕ್ಕೆ ಬಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರವು ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಗುರುವಾರ ಹೇಳಿದ್ದಾರೆ.

ತೆಲಂಗಾಣ ಲಾಂಛನ ಮತ್ತು ತೆಲಂಗಾಣ ಮಾತೆಯ ಪ್ರತಿಮೆ ಕುರಿತು ವಿಧಾನಸಭೆಯಲ್ಲಿ ಚರ್ಚಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ತಪ್ಪು ಕಲ್ಪನೆ ಅಥವಾ ಸುಳ್ಳು ಪ್ರಚಾರ ಮಾಡಕೂಡದು ಎಂದು ರೆಡ್ಡಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT