ರಾಯಚೋಟಿ (ಆಂಧ್ರಪ್ರದೇಶ): ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ಇತ್ತೀಚೆಗಷ್ಟೇ ತಮಿಳುನಾಡು ಪೊಲೀಸರಿಂದ ಬಂಧನಕ್ಕೀಡಾಗಿರುವ ಇಬ್ಬರು ವ್ಯಕ್ತಿಗಳ ಪೈಕಿ, ಒಬ್ಬ ಬಾಂಬ್ ತಯಾರಿಕೆಯಲ್ಲಿ ನಿಸ್ಸೀಮ ಎಂದು ಆಂಧ್ರಪ್ರದೇಶ ಪೊಲೀಸರು ಶನಿವಾರ ಹೇಳಿದ್ದಾರೆ.

ಬಂಧಿತನನ್ನು ಅಬುಬಕ್ಕರ್ ಸಿದ್ದೀಕಿ ಎಂದು ಗುರುತಿಸಲಾಗಿದ್ದು, ಆತ ಇಸ್ಲಾಂನ ವಿವಾದಾತ್ಮಕ ಬೋಧಕ ಝಾಕೀರ್ ನಾಯ್ಕ್ ಬೋಧನೆಗಳಿಂದ ಪ್ರೇರಿತನಾಗಿ ಒಬ್ಬನೇ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಯೋಜಿಸಿದ್ದ ಎಂದೂ ಕರ್ನೂಲ್ ಡಿಐಜಿ ಕೊಯಾ ಪ್ರವೀಣ್ ಮಾಹಿತಿ ನೀಡಿದ್ದಾರೆ.

‘ಝಾಕಿರ್ನಿಂದ ಪ್ರೇರಿತನಾಗಿರುವ ಸಿದ್ದೀಕಿ, ಅದೇ ರೀತಿಯ ಚಿಂತನೆಗಳನ್ನು ಹೊಂದಿರುವವರಿಗೆ ಭಯೋತ್ಪಾದನಾ ತರಬೇತಿ ನೀಡುತ್ತಿದ್ದ. ದೇಶದ ಉದ್ಧಗಲಕ್ಕೂ ಸಂಚರಿಸಿದ್ದಲ್ಲದೇ ಪದೇ ಪದೇ ಗಲ್ಫ್ ರಾಷ್ಟ್ರಗಳಿಗೂ ಭೇಟಿ ನೀಡುತ್ತಿದ್ದ. ಸುಧಾರಿತ ಕಚ್ಚಾ ಬಾಂಬ್ (ಐಇಡಿ), ಟೈಮರ್ ಸ್ಫೋಟಕ, ಎಲೆಕ್ಟ್ರಾನಿಕ್ ಸ್ಫೋಟಕಗಳ ತಯಾರಿಕೆಯಲ್ಲಿ ನಿಸ್ಸೀಮನಾಗಿರುವ ಆತ ಬಹುದೊಡ್ಡ ಪಾತಕಿ’ ಎಂದೂ ಡಿಐಜಿ ಹೇಳಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯ ಎದುರು ಸ್ಫೋಟ ನಡೆಸಿದ್ದಿದ್ದು, ಇದೇ ಸಿದ್ದೀಕಿ ಎಂದೂ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, 2011ರಲ್ಲಿ ತಮಿಳುನಾಡಿನ ಮದುರೈನಲ್ಲಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ಸಂದರ್ಭದಲ್ಲಿ ನಡೆದಿದ್ದ ಪೈಪ್ ಬಾಂಬ್ ಸ್ಫೋಟ ಪ್ರಯತ್ನದಲ್ಲೂ ಸಿದ್ದೀಕಿಯ ಕೈವಾಡ ಇತ್ತು ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.