ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮ: ಭಯೋತ್ಪಾದನೆ ಪ್ರಕರಣ ಆರೋಪಿಯ ಆಸ್ತಿ ಮುಟ್ಟುಗೋಲು

Published 10 ಮೇ 2023, 11:31 IST
Last Updated 10 ಮೇ 2023, 11:31 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ‘ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಯೋತ್ಪಾದನೆ ಪ್ರಕರಣದ ಆರೋಪಿಯೊಬ್ಬನ ಆಸ್ತಿಯನ್ನು ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಎನ್‌ಐಎಯು ತನ್ನ ಕಾರ್ಯಾಚರಣೆಯ ಭಾಗವಾಗಿ, ದಕ್ಷಿಣ ಕಾಶ್ಮೀರದ ಜಿಲ್ಲೆಯ ಅವಂತಿಪೊರಾ ಪ್ರದೇಶದ ಲೆಥ್‌ಪೊರಾದಲ್ಲಿರುವ ಆರೋಪಿ ಫಯಾಜ್‌ ಅಹ್ಮದ್‌ ಮಾಗ್ರೆ ಎಂಬಾತನಿಗೆ ಸೇರಿದ ಆರು ಅಂಗಡಿಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಂಡಿದೆ. ಆತನ ವಿರುದ್ಧ ಎನ್‌ಐಎ ಭಯೋತ್ಪಾದನೆಯ ಪ್ರಕರಣ ದಾಖಲಿಸಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT