ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಸಮಾವೇಶಗಳನ್ನು ನಿಲ್ಲಿಸಬೇಕು: ಬಾಂಬೆ ಹೈಕೋರ್ಟ್

Last Updated 30 ಜೂನ್ 2021, 21:03 IST
ಅಕ್ಷರ ಗಾತ್ರ

ಮುಂಬೈ: ರಾಜ್ಯದಲ್ಲಿ ರಾಜಕೀಯ ಸಮಾವೇಶಗಳನ್ನು ನಿಲ್ಲಿಸಬೇಕು ಎಂದು ಬಾಂಬೆ ಹೈಕೋರ್ಟ್ ಬುಧವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ. ರಾಜ್ಯದಲ್ಲಿ ಕೋವಿಡ್‌ ಸಾಂಕ್ರಾಮಿಕ ಇರುವಾಗಲೇ ಕೋವಿಡ್‌ ನಿಯಮಾವಳಿಗಳನ್ನುಗಾಳಿಗೆ ತೂರಿ ರಾಜಕೀಯ ಸಮಾವೇಶಗಳನ್ನು ನಡೆಸಲಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ದೀಪಂಕರ್‌ ಗುಪ್ತಾ ಮತ್ತು ಜಿ.ಎಸ್‌. ಕುಲಕರ್ಣಿ ಅವರಿದ್ದ ಪೀಠ ಹೇಳಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವುದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಜನರು ಗುಂಪು ಸೇರುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಆದರೂ ವಿಮಾನ ನಿಲ್ದಾಣ ಹೆಸರಿನಲ್ಲಿ ನಡೆದ ಸಮಾವೇಶವೂ ಸೇರಿ ಹಲವು ಸಮಾವೇಶಗಳು ನಡೆಯಲು ಸರ್ಕಾರ ಹೇಗೆ ಅನುವು ಮಾಡಿದೆ. ಮುಂದಿನ ದಿನಗಳಲ್ಲಿ, ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ನಡೆವ ಇಂತಹ ರಾಜಕೀಯ ರ್‍ಯಾಲಿಗಳನ್ನು ತಡೆಯಲು ಮಹಾರಾಷ್ಟ್ರ ಸರ್ಕಾರಕ್ಕೆ ಯಾವುದೇ ರೀತಿಯ ಆಡಳಿತ ವ್ಯವಸ್ಥೆಯನ್ನು ಜಾರಿತರಲು ಆಗದಿದ್ದರೆ, ಕೋರ್ಟ್ ಮಧ್ಯಪ್ರವೇಶಿಸಿ ಅಂತಹ ರ್‍ಯಾಲಿಗಳನ್ನು ತಡೆಯಲಿದೆ. ನಮಗೆ ಪೂರ್ಣಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಲು ಆಗತ್ತಿಲ್ಲ. ಅಂತಹದರಲ್ಲಿ ರಾಜಕೀಯ ಮುಖಂಡರು ರ್‍ಯಾಲಿಗಳನ್ನು ಹೇಗೆ ನಡೆಸುತ್ತಾರೆ ಎಂದು ಕೋರ್ಟ್, ಮಹಾರಾಷ್ಟ್ರದ ಅಡ್ವೊಕೇಟ್‌ ಜನರಲ್‌ ಆಶುತೋಷ್‌ ಕುಂಭಕೋಣಿ ಅವರನ್ನು ಪ್ರಶ್ನಿಸಿದೆ.

ನವಿ ಮುಂಬೈನಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಹೆಸರಿಡಬೇಕು ಎಂದು ಆಗ್ರಹಿಸಿ ಕಳೆದ ವಾರ ರ್‍ಯಾಲಿ ನಡೆಸಲಾಗಿತ್ತು. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕೋರ್ಟ್, ‘ವಿಮಾನ ನಿಲ್ದಾಣ ಇನ್ನೂ ಪೂರ್ಣವಾಗಿಲ್ಲ. ಆಗಲೇ ಅದಕ್ಕೆ ಇಡಬಹುದಾದ ಹೆಸರಿನ ಕುರಿತು ಜನರು ರಾಜಕೀಯ ಉದ್ದೇಶದಿಂದ ರ್‍ಯಾಲಿ ನಡೆಸಿದ್ದಾರೆ. ಇದಕ್ಕೆ ಸುಮಾರು 5,000 ಜನರು ಸೇರಿರಬಹುದು ಎಂದು ನಾವು ಅಂದಾಜಿಸಿದ್ದೆವು. ಆದರೆ 25,000ಕ್ಕೂ ಹೆಚ್ಚು ಜನರು ಸೇರಿದ್ದರು’ ಎಂದುಹೇಳಿದೆ.

***

ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ವರೆಗೆ ಕಾಯಲು ಸಾಧ್ಯವಿಲ್ಲವೇ. ರಾಜಕೀಯ ಲಾಭಕ್ಕಾಗಿ ರ‍್ಯಾಲಿ ನಡೆಸುವುದು ಕೊರೊನಾ ಹರಡುವಿಕೆ ತಡೆಯುವುದಕ್ಕಿಂತ ಮುಖ್ಯವೇ?
-ಬಾಂಬೆ ಹೈಕೋರ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT