ಬೆಂಗಳೂರು: ತಿರುಪತಿ ಲಾಡು ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್, 'ಈ ಘಟನೆಯು ಹಿಂದೂಗಳ ಮನಸ್ಸಿನಲ್ಲಿ ತೀವ್ರ ನೋವು ಹಾಗೂ ಆಕ್ರೋಶವನ್ನು ಉಂಟು ಮಾಡಿದೆ' ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಸ್ವ-ಹಿತಾಸಕ್ತಿಯ ಅಧಿಕಾರಿಗಳು, ನಿರ್ದಯಿ ವ್ಯಾಪಾರಸ್ಥರು ಮತ್ತು ರಾಜಕಾರಣಿಗಳ ಬದಲು ದೇವಾಲಯದ ನಿರ್ವಹಣೆಯನ್ನು ಧಾರ್ಮಿಕ ಮುಖಂಡರು ಹಾಗೂ ಭಕ್ತರಿಗೆ ವಹಿಸಿಕೊಡುವ ಸಮಯ ಬಂದಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ತಿರುಪತಿ ಲಾಡುವಿನ ಶುದ್ಧತೆ ಮತ್ತು ಕಲಬೆರಕೆ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು' ಎಂದು ಅವರು ಬಯಸಿದ್ದಾರೆ.