ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Manipur: ನಿಷೇಧಿತ ಸಂಘಟನೆಯ ಮೂವರು ಉಗ್ರರ ಬಂಧನ

Published 22 ಮೇ 2024, 5:01 IST
Last Updated 22 ಮೇ 2024, 5:01 IST
ಅಕ್ಷರ ಗಾತ್ರ

ಇಂಫಾಲ: ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆ ಕಾಂಗ್ಲೀಪಕ್ ಕಮ್ಯುನಿಸ್ಟ್ ಪಾರ್ಟಿಯ (ಕಸಿಪಿ) ಮೂವರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಉಗ್ರರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮಣಿಪುರ ಪೊಲೀಸರು, ಗೂರ್ಖಾ ರೈಫಲ್ಸ್ ಮತ್ತು ಅಸ್ಸಾಂ ರೈಫಲ್ಸ್ ಜಂಟಿ ಕಾರ್ಯಾಚರಣೆಯನ್ನು ಕೈಗೊಂಡಿತ್ತು.

ತೌಬಲ್ ಜಿಲ್ಲೆಯ ಖೊಂಗ್‌ಜೋಮ್ ಬಜಾರ್‌ನ ತೆಕ್ಚಾಮ್ ಲಾಮ್ಕೈ ಪ್ರದೇಶದಲ್ಲಿ ತೈಂಬನ್‌ಗಂಬ ನೇತೃತ್ವದ ಕೆಸಿಪಿ ಸಂಘಟನೆಯ ಮೂವರು ಉಗ್ರರನ್ನು ಬಂಧಿಸಿದೆ.

ಬಂಧಿತರಿಂದ ಒಂದು ಕಾರು, ಮೂರು ಮೊಬೈಲ್, ಎರಡು ದೇಶಿ ನಿರ್ಮಿತ 9 ಎಂಎಂ ಪಿಸ್ತೂಲ್, ಮ್ಯಾಗಜೀನ್, 9ಎಂಎಂನ 14 ಜೀವಂತ ಗುಂಡುಗಳು, 7.62ಎಂಎಂನ 5 ಜೀವಂತ ಗುಂಡುಗಳು ಮತ್ತು ನಾಲ್ಕು ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇಂಫಾಲ ಪಶ್ಚಿಮ ಜಿಲ್ಲೆಯ ಲಮ್‌ಸಂಗ್ ಪ್ರದೇಶದಲ್ಲಿ ಮಂಗಳವಾರ ನಡೆಸಿದ್ದ ಮಗದೊಂದು ಕಾರ್ಯಾಚರಣೆಯಲ್ಲಿ ನಿಷೇಧಿತ ಆರ್‌ಪಿಎಫ್/ಪಿಎಲ್‌ಎ ಸಂಘಟನೆಯ ಆರು ಮಂದಿಯನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT