ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ರಾಮ ಮಂದಿರದ 20 ಅರ್ಚಕರ ಹುದ್ದೆಗೆ ಮೂರು ಸಾವಿರ ಅರ್ಜಿ!

Published 21 ನವೆಂಬರ್ 2023, 11:20 IST
Last Updated 21 ನವೆಂಬರ್ 2023, 11:20 IST
ಅಕ್ಷರ ಗಾತ್ರ

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದಲ್ಲಿ ಇನ್ನೇನು ಕೆಲವೇ ತಿಂಗಳಿನಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿ ಪೂಜೆ ಆರಂಭವಾಗಲಿದೆ. ರಾಮ ಮಂದಿರದಲ್ಲಿ ಪೂಜೆಗೆ 20 ಮಂದಿ ಅರ್ಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಬರೋಬ್ಬರಿ 3 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹುದ್ದೆಗಳ ನೇಮಕಾತಿ ಜಾಹೀರಾತು ವಿಭಾಗ ಮಾಹಿತಿ ನೀಡಿದೆ.

ಅರ್ಜಿ ಸಲ್ಲಿಸಿದ 3 ಸಾವಿರ ಜನರಲ್ಲಿ 200 ಅಭ್ಯರ್ಥಿಗಳನ್ನು ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇವರ ಸಂದರ್ಶನವನ್ನು ಅಯೋಧ್ಯೆಯ ವಿಶ್ವ ಹಿಂದು ಪರಿಷತ್‌ನ ಮುಖ್ಯ ಕಚೇರಿ ‘ಕರಸೇವಕ ಪುರಮ್‌’ನಲ್ಲಿ ನಡೆಸಿ 20 ಜನರನ್ನು ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್‌ ಹೇಳಿದೆ. 

ಆಯ್ಕೆಯಾದ ಅಭ್ಯರ್ಥಿಗಳಿಗೆ ವಸತಿ ಸಹಿತ ತರಬೇತಿ ನೀಡಿ ಆರು ತಿಂಗಳ ನಂತರ ಅರ್ಚಕ ಹುದ್ದೆಗಳಿಗೆ ನಿಯೋಜಿಸಲಾಗುವುದು. 200 ಜನರಲ್ಲಿ ಆಯ್ಕೆಯಾಗದವರೂ ತರಬೇತಿ ಪಡೆಯಬಹುದು ಅವರಿಗೆ ಪ್ರಮಾಣಪತ್ರ ನೀಡಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಅರ್ಚಕರ ಹುದ್ದೆಗಳಿಗೆ ಕರೆಸಿಕೊಳ್ಳುವ ಅವಕಾಶವನ್ನೂ ಅವರು ಹೊಂದಿರುತ್ತಾರೆ ಎಂದು ಟ್ರಸ್ಟ್‌ನ ಖಜಾಂಚಿ ಗೋವಿಂದ ದೇವ್‌ ಗಿರಿ ಹೇಳಿದ್ದಾರೆ.

ವಿದ್ವಾಂಸರು ಸಿದ್ಧಪಡಿಸಿದ ಧಾರ್ಮಿಕ ಪಠ್ಯಕ್ರಮದ ಆಧಾರದ ಮೇಲೆ ತರಬೇತಿ ನೀಡಲಾಗುತ್ತದೆ. ತರಬೇತಿಯ ಸಮಯದಲ್ಲಿ, ಅಭ್ಯರ್ಥಿಗಳಿಗೆ ಉಚಿತ ಊಟ–ವಸತಿ ಮತ್ತು ಗೌರವಧನವಾಗಿ ‌₹ 2,000 ನೀಡಲಾಗುತ್ತದೆ ಎಂದು ಅವರು ಹೇಳಿದರು.

ಸಂದರ್ಶನ ಹೇಗಿರಲಿದೆ?

ಅರ್ಚಕರಾಗಿ ನೇಮಕಗೊಳ್ಳುವವರಿಗೆ ಸಂದರ್ಶನ ಸಮಯದಲ್ಲಿ ಸಂಧ್ಯಾ ವಂದನೆ ಎಂದರೇನು, ಅದರ ಹಂತ ಅಥವಾ ಪ್ರಕ್ರಿಯೆಗಳೇನು, ಇದಕ್ಕೆ ಯಾವೆಲ್ಲಾ ಮಂತ್ರಗಳನ್ನು ಹೇಳಬೇಕು, ಶ್ರೀ ರಾಮನನ್ನು ಪೂಜಿಸಲು ಯಾವ ಮಂತ್ರಗಳನ್ನು ಹೇಳಬೇಕು, ಯಾವ ರೀತಿಯ ಪೂಜಾ ಕ್ರಮಗಳನ್ನು ಪಾಲಿಸಬೇಕು ಸೇರಿದಂತೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಗಿರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT