ಜೈಪುರ: ಹೆಡ್‌ಕಾನ್‌ಸ್ಟೆಬಲ್ ಒಬ್ಬರನ್ನು ಮನೆಗೆ ಕರೆಸಿ ಅವರ ಜೊತೆ ಲೈಂಗಿಕ ಸಂಬಂಧ ಬೆಳೆಸಿ ಅಶ್ಲೀಲ ವಿಡಿಯೊ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಮಹಿಳೆಯರು ₹ 4 ಲಕ್ಷ ನೀಡುವಂತೆ ಪೇದೆಯನ್ನು ಪೀಡಿಸುತ್ತಿದ್ದರು ಎಂದು ಕರಣ್‌ಪುರ್ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಂದ್ರ ಸಿಂಗ್ ಹೇಳಿದ್ದಾರೆ.

ಹಳ್ಳಿಯೊಂದರಿಂದ ಸುಖ್‌ಪ್ರೀತ್ ಕೌರ್ ಎಂಬ ಮಹಿಳೆ ಕರೆ ಮಾಡಿ ತಮ್ಮ ಮನೆಯ ಹುಡುಗಿಯೊಬ್ಬಳು ಕಾಣೆಯಾಗಿರುವುದಾಗಿ ಹೇಳಿದ್ದರು. ಬಳಿಕ, ಪರಿಶೀಲನೆಗೆ ಮಹಿಳೆಯ ಮನೆಗೆ ತೆರಳಿದಾಗ ಆಕೆ ಮತ್ತು ಇನ್ನಿಬ್ಬರು ಮಹಿಳೆಯರು ನನ್ನನ್ನು ಮೋಹಿಸಿ ಲೈಂಗಿಕ ಸಂಪರ್ಕದ ಅಶ್ಲೀಲ ವಿಡಿಯೊ ಮಾಡಿದರು ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಬಳಿಕ, ಸುಖ್‌ಪ್ರೀತ್ ಸಿಂಗ್ ₹ 4 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಕಾನ್‌ಸ್ಟೆಬಲ್ ಹೇಳಿದ್ದಾರೆ.

ಬಂಧಿತ, ಉಳಿದ ಇಬ್ಬರು ಮಹಿಳೆಯರನ್ನು ವಿಮಲಾ, ಪಂಜಲ್ ಶರ್ಮಾ ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.