ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ | ಬಿಜೆಪಿ ನಾಯಕನ ಹತ್ಯೆ ಪ್ರಕರಣ: ಮೂವರು ನಕ್ಸಲರ ಬಂಧನ

Published 16 ಮೇ 2024, 15:48 IST
Last Updated 16 ಮೇ 2024, 15:48 IST
ಅಕ್ಷರ ಗಾತ್ರ

ಬಿಜಾಪುರ(ಛತ್ತೀಸಗಢ): ಬಿಜೆಪಿ ಮುಖಂಡರೊಬ್ಬರ ಹತ್ಯೆಯಲ್ಲಿ ಪಾತ್ರವಿದೆ ಎಂಬ ಆರೋಪ ಎದುರಿಸುತ್ತಿದ್ದ ಮೂವರು ನಕ್ಸಲರನ್ನು ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಕ್ಸಲರ ಗುಂಪಿನ ಕಮಾಂಡರ್‌ ಮುನ್ನಾ ಮುದ್ಮಾ(32), ಮುಖಂಡ ಲಖ್ಮು ಮುದ್ಮಾ (39) ಹಾಗೂ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆಯ ರಾಜು ಮುದ್ಮಾ(31) ಬಂಧಿತರು. ಎಲ್ಲರೂ ಬಿಜಾಪುರ ಜಿಲ್ಲೆಯ ಚಿಂತನಪಲ್ಲಿ ಗ್ರಾಮದವರು.

‘ಬಿಜಾಪುರ ಜಿಲ್ಲೆಯ ಜನಪಾಡ್ ಗ್ರಾಮ ಪಂಚಾಯಿತಿ ಸದಸ್ಯ ತಿರುಪತಿ ಕಟ್ಲಾ ಎಂಬುವವರ ಕೊಲೆಯಲ್ಲಿ ಮೂವರ ಪಾತ್ರವಿದೆ ಎಂಬ ಆರೋಪವಿದೆ. ತಿರುಪತಿ ಅವರು ತೋಯ್ನಾರ್‌ ಗ್ರಾಮದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ, ಆರೋಪಿಗಳು ಹರಿತವಾದ ಆಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದಿದ್ದರು ಎಂಬ ಆರೋಪ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT