ಭೋಪಾಲ್/ಬೆಂಗಳೂರು: ಜಗತ್ತಿನಲ್ಲಿರುವ ಹುಲಿಗಳ ಸಂಖ್ಯೆಯಲ್ಲಿ ಶೇ 75ರಷ್ಟು ಹುಲಿಗಳಿಗೆ ಭಾರತವೇ ತವರು. 2018ರಲ್ಲಿ 2,967 ಇದ್ದ ಹುಲಿಗಳ ಸಂಖ್ಯೆಯು 2022ರ ಹೊತ್ತಿಗೆ 3,682ಕ್ಕೆ ತಲುಪಿತು. ಸಂಖ್ಯೆ ಅಧಿಕವಾಗುತ್ತಿದೆಯಾದರೂ ಹುಲಿಗಳ ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. 2025ರಲ್ಲಿ ದೇಶದಾದ್ಯಂತ ಒಟ್ಟು 166 ಹುಲಿಗಳು ಮೃತಪಟ್ಟಿವೆ. 2024ಕ್ಕೆ ಹೋಲಿಸಿಕೊಂಡರೆ, 2025ರಲ್ಲಿ ಹುಲಿಗಳ ಸಾವಿನ ಸಂಖ್ಯೆಯು ಏರಿಕೆಯಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ವೆಬ್ಸೈಟ್ನಲ್ಲಿನ ಹುಲಿಗಳ ಸಾವಿನ ಮಾಹಿತಿಯಲ್ಲಿ ಈ ಎಲ್ಲ ಅಂಶಗಳು ಕಂಡುಬಂದಿದೆ.

‘ಹುಲಿಗಳಿಗೆ ಜಾಗ ಎಲ್ಲಿದೆ?’

ದೇಶದಲ್ಲಿನ ಹುಲಿ ಸಂಖ್ಯೆಯು ಅತ್ಯಧಿಕ ಮಟ್ಟವನ್ನು ತಲುಪಿದೆ. ಈ ಕಾರಣದಿಂದಲೇ ಅವುಗಳು ಗಡಿ ಸಮಸ್ಯೆಯನ್ನು ಎದುರಿಸುತ್ತಿವೆ. ಮಧ್ಯ ಪ್ರದೇಶದ ಕುರಿತೇ ಮಾತನಾಡುವುದಾದರೆ, 2014ರಿಂದ ಈಚೆಗೆ ಹುಲಿಗಳ ಸಂಖ್ಯೆಯು ಶೇ 60ರಷ್ಟು ಹೆಚ್ಚಳವಾಗಿವೆ. ಇದಂತೂ ಭಾರಿ ಬೆಳವಣಿಗೆಯೇ ಆಗಿದೆ. ಇಲ್ಲಿರುವ ಪ್ರಶ್ನೆ ಏನೆಂದರೆ, ಇಷ್ಟೊಂದು ಹುಲಿಗಳಿಗೆ ಜಾಗ ಎಲ್ಲಿದೆ? ತಮ್ಮ ಗಡಿಯನ್ನು ಗುರುತಿಸಿಕೊಳ್ಳುವುದಕ್ಕಾಗಿ ಹುಲಿಗಳು ಪರಸ್ಪರ ಜಗಳವಾಡುತ್ತಿದ್ದಾವೆ ಮತ್ತು ಸಾಯುತ್ತಿವೆ

– ಜೈರಾಮ್ ಶುಕ್ಲಾ, ವನ್ಯಜೀವಿ ತಜ್ಞ

‘ಹುಲಿ ಹೆಚ್ಚಿರುವಲ್ಲಿ ಸಾವಿನ ಸಂಖ್ಯೆಯೂ ಹೆಚ್ಚು’

ಜಗತ್ತಿನಲ್ಲಿಯೇ ಮಧ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳಿವೆ. ಆದ್ದರಿಂದ ಈ ಪ್ರದೇಶದಲ್ಲಿಯೇ ಹುಲಿಗಳ ಸಾವಿನ ಸಂಖ್ಯೆಯು ಅಧಿಕವಾಗಿರುತ್ತವೆ. ಇದು ಸಹಜ. ಹುಲಿಗಳ ಸಾವುಗಳನ್ನು ನಾವು ಬೇಟೆಯಾಡಿದ್ದು ಎಂದೇ ಪರಿಗಣಿಸುತ್ತೇವೆ. ಇದಕ್ಕೆ ವ್ಯತಿರಿಕ್ತ ಮಾಹಿತಿಗಳು ದೊರೆತರೆ, ಮಾಹಿತಿಯಂತೆಯೇ ಸಾವಿನ ಕಾರಣವನ್ನು ದಾಖಲು ಮಾಡಿಕೊಳ್ಳುತ್ತೇವೆ. ಮನುಷ್ಯನ ಕಾರಣದಿಂದ ಅರಣ್ಯದ ವ್ಯಾಪ್ತಿಯು ಕುಗ್ಗುತ್ತಲೇ ಇದೆ. ಇದರಿಂದ ಹುಲಿಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ

–ಸುಭರಂಜನ್ ಸೇನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)

ಸಾವಿಗೆ ನಿಖರ ಕಾರಣ ತಿಳಿಸುವುದು ಮುಖ್ಯ:

ಹುಲಿಗಳು ಸಾಯುತ್ತವೆ ಎನ್ನುವುದು ನೈಸರ್ಗಿಕ ಪ್ರಕ್ರಿಯೆ. ಆದರೆ, ಸಾವಿನ ಕಾರಣ ಮುಖ್ಯವಾಗುತ್ತದೆ. ಕಳೆದ ವರ್ಷ ಜೂನ್ನಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳಿಗೆ ವಿಷ ಉಣಿಸಿದ ಪ್ರಕರಣ ನಡೆದಿತ್ತು. ಇದು ಗಂಭೀರವಾದುದು. ಅಪಘಾತಗಳಿಂದ ಸಾಯುವುದು, ಬೇಟೆಯಾಡುವುದು, ಹುಲಿಗಳ ಉಗುರು, ಚರ್ಮ ಕಳ್ಳಸಾಗಣೆಗಾಗಿ ಹತ್ಯೆ ಮಾಡುತ್ತಾರೆ ಎನ್ನುವುದು ಆಲೋಚಿಸಬೇಕಾದ ವಿಷಯ. ಆದ್ದರಿಂದ, ವರದಿಗಳಲ್ಲಿ ಹುಲಿಗಳ ಸಾವಿಗೆ ನಿಖರ ಕಾರಣ ತಿಳಿಸಿದರೆ, ಅನುಕೂಲವಾಗುತ್ತದೆ

ಸಂಜಯ್ ಗುಬ್ಬಿ, ವನ್ಯಜೀವಿ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.