ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಬಿ ಅಧ್ಯಕ್ಷೆ ಮಾಧವಿ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ದೂರು

Published : 13 ಸೆಪ್ಟೆಂಬರ್ 2024, 13:03 IST
Last Updated : 13 ಸೆಪ್ಟೆಂಬರ್ 2024, 13:03 IST
ಫಾಲೋ ಮಾಡಿ
Comments

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರ ವಿರುದ್ಧ ಲೋಕಪಾಲಕ್ಕೆ ದೂರು ನೀಡಿರುವುದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರು ಶುಕ್ರವಾರ ತಿಳಿಸಿದ್ದಾರೆ.

ಲೋಕಪಾಲ ಸಂಸ್ಥೆಯು ಈ ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಇ.ಡಿ ಅಥವಾ ಸಿಬಿಐಗೆ ಸೂಚಿಸಬೇಕು, ಅದಾದ ನಂತರ ‘ಪೂರ್ಣ ಪ್ರಮಾಣದಲ್ಲಿ ಎಫ್‌ಐಆರ್ ದಾಖಲಿಸಿ’ ತನಿಖೆ ನಡೆಸಬೇಕು ಎಂದು ಮಹುವಾ ಅವರು ಆಗ್ರಹಿಸಿದ್ದಾರೆ.

ದೂರನ್ನು ಆನ್‌ಲೈನ್‌ ಮೂಲಕ ಹಾಗೂ ಭೌತಿಕವಾಗಿ ನೀಡಿರುವುದಕ್ಕೆ ದಾಖಲೆಗಳನ್ನು ಮಹುವಾ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ‘ಲೋಕಪಾಲ ಸಂಸ್ಥೆಯು ಈ ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐ ಅಥವಾ ಇ.ಡಿ.ಗೆ 30 ದಿನಗಳ ಒಳಗೆ ಸೂಚನೆ ನೀಡಬೇಕು’ ಎಂದು ಅವರು ಹೇಳಿದ್ದಾರೆ.

ಇಲ್ಲಿ ಭಾಗಿಯಾಗಿರುವ ಪ್ರತಿ ಸಂಸ್ಥೆಯನ್ನೂ ತನಿಖೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT