ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Train Accidents | 2020ರ ನಂತರ ನಡೆದ ಪ್ರಮುಖ ರೈಲು ಅಪಘಾತಗಳು..ಪಟ್ಟಿ ಇಲ್ಲಿದೆ

Published 18 ಜೂನ್ 2024, 3:24 IST
Last Updated 18 ಜೂನ್ 2024, 3:24 IST
ಅಕ್ಷರ ಗಾತ್ರ

ಕೋಲ್ಕತ್ತ: ನಿನ್ನೆ (ಜೂನ್‌ 17) ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಸರಕು ಸಾಗಣೆ ರೈಲು ಹಿಂದಿನಿಂದ ಡಿಕ್ಕಿಹೊಡೆದು, ಎಕ್ಸ್‌ಪ್ರೆಸ್‌ ರೈಲಿನ ಹಿಂದಿನ ನಾಲ್ಕು ಬೋಗಿಗಳು ಹಳಿತಪ್ಪಿದ ಪರಿಣಾಮವಾಗಿ ಒಂಬತ್ತು ಜನ ಮೃತಪಟ್ಟಿದ್ದಾರೆ, 41 ಮಂದಿಗೆ ಗಾಯಗಳಾಗಿವೆ.

2020ರ ನಂತರ ನಡೆದ ಪ್ರಮುಖ ರೈಲು ಅಪಘಾತಗಳು..

 • ಮೇ 8, 2020: ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯು ಕರ್ಮಾಡ್‌ ಪೊಲೀಸ್‌ ಠಾಣೆ ಬಳಿಯ ರೈಲ್ವೆ ಹಳಿ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಮಧ್ಯಪ್ರದೇಶದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ಸಾವು (ಕೋವಿಡ್‌ ಲಾಕ್‌ ಡೌನ್‌ ಸಮಯದಲ್ಲಿ ಈ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಊರಿಗೆ ಹೊರಟಿದ್ದರು)

 •  ಜನವರಿ 12, 2023: ಪಶ್ಚಿಮ ಬಂಗಾಳದ ಆಲಿಪುರದ್ವಾರ ಪ್ರದೇಶದಲ್ಲಿ ಬೀಕಾನೆರ್‌–ಗುವಾಹಟಿ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿತಪ್ಪಿ ಒಂಬತ್ತು ಪ್ರಯಾಣಿಕರು ಸಾವು,
  36 ಮಂದಿಗೆ ಗಾಯ

 •  ಜೂನ್‌ 2, 2023: ಒಡಿಶಾದ ಬಾಲೇಶ್ವರದಲ್ಲಿ ಬೆಂಗಳೂರು–ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌, ಶಾಲಿಮಾರ್‌ ಚೆನ್ನೈ ಸೆಂಟ್ರಲ್ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಗೂಡ್ಸ್‌ ರೈಲಿನ ನಡುವೆ ಡಿಕ್ಕಿ. 296 ಮಂದಿ ಸಾವು, 1,200 ಜನರಿಗೆ ಗಾಯ

 •  ಆಗಸ್ಟ್‌ 26, 2023: ತಮಿಳುನಾಡಿನ ಮದುರೆ ನಿಲ್ದಾಣದ ಬಳಿ ಲಖನೌ–ರಾಮೇಶ್ವರ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಆಕಸ್ಮಿಕ ಅನಾಹುತ ಸಂಭವಿಸಿ ಒಂಬತ್ತು ಪ್ರಯಾಣಿಕರ ಸಾವು,
  20 ಜನರಿಗೆ ಗಾಯ

 •  ಅಕ್ಟೋಬರ್‌ 11, 2023: ಬಿಹಾರದ ಬಕ್ಸಾರ್‌ ಸಮೀಪದ ರಘುನಾಥಪುರ ರೈಲು ನಿಲ್ದಾಣದಲ್ಲಿ 12,506 ನಾರ್ತ್‌ ಈಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಆರು ಬೋಗಿಗಳು ಹಳಿತಪ್ಪಿದ್ದರಿಂದ ನಾಲ್ವರು ಮೃತಪಟ್ಟು, 70 ಮಂದಿಗೆ ಗಾಯ

 •  ಅಕ್ಟೋಬರ್‌ 29, 2023: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲಯ ಹೌರಾ–ಚೆನ್ನೈ ಮಾರ್ಗದಲ್ಲಿ
  ರಾಯಗಡ ಪ್ಯಾಸೆಂಜರ್‌ ರೈಲಿಗೆ ವಿಶಾಖಪಟ್ಟಣ–ಪಾಲಾಷ
  ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು 14 ಪ್ರಯಾಣಿಕರು ಮೃತಪಟ್ಟು,
  50 ಜನರಿಗೆ ಗಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT