ವಾಷಿಂಗ್ಟನ್: ‘ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ‘ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ‘ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಹೋಗುತ್ತೇನೆ, ಅಲ್ಲೇ ಹೋರಾಡುತ್ತೇನೆ‘ ಎಂದು ಹೇಳಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್ ಅವರು, ಯಾವುದೇ ಘಟನೆಗಳನ್ನು ಉಲ್ಲೇಖಿಸದೇ ಈ ಹೇಳಿಕೆ ನೀಡಿದ್ದಾರೆ. ‘ನಾವು ಈಗಾಗಲೇ ಚುನಾವಣೆ ಗೆದ್ದಿದ್ದೇವೆ. ಕೋಟ್ಯಂತರ ಜನರು ನನಗೆ ಮತ ಹಾಕಿದ್ದಾರೆ‘ ಎಂದು ಹೇಳಿಕೊಂಡಿದ್ದಾರೆ.

’ನಾವು ಎಲ್ಲವುದನ್ನೂ ಗೆದ್ದಿದ್ದಾಗಿದೆ. ಹೀಗಾಗಿ ಬಹುದೊಡ್ಡ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದೆವು. ಆದರೆ ದಿಢೀರನೆ ಎಲ್ಲವನ್ನೂ ನಿಲ್ಲಿಸಬೇಕಾಯಿತು‘ ಎಂದು ಹೇಳಿದರು.

‘ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ. ಇದೊಂದು ದೊಡ್ಡ ವಂಚನೆ. ಇದರಿಂದ ನಮ್ಮ ಜನಕ್ಕೆ ಮುಜುಗರ ಉಂಟಾಗುತ್ತಿದೆ‘ ಎಂದು ಹೇಳಿದ ಟ್ರಂಪ್, ತಮ್ಮ ಹೇಳಿಕೆಗಳಿಗೆ ಸೂಕ್ತವಾದ ಕಾರಣ ಮತ್ತು ಘಟನೆಗಳನ್ನು ತಿಳಿಸಲಿಲ್ಲ.

‘ಎಲ್ಲ ರಾಜ್ಯಗಳಲ್ಲಿ ಮತದಾನದ ಕೆಲಸ ಮುಗಿದ ನಂತರ, ನಾನು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ. ಅಲ್ಲಿ ಚುನಾವಣೆ ಕುರಿತು ಹೋರಾಟ ಮಾಡುತ್ತೇನೆ‘ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.