ನವದೆಹಲಿ: ಸ್ಪೇಸ್ ಡಾಕಿಂಗ್ ಪ್ರಯೋಗವನ್ನು ನಿರ್ವಹಿಸಲು ಇಸ್ರೊ ಉಡಾವಣೆ ಮಾಡಿರುವ ಎರಡು ಉಪಗ್ರಹಗಳು 15 ಮೀಟರ್ ಅಂತರದಲ್ಲಿವೆ. ಅಭೂತಪೂರ್ವ ಜೋಡಣೆಗೆ ಕಾಲ ಸನ್ನಿಹಿತವಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಭಾನುವಾರ ತಿಳಿಸಿದೆ.

ಎಸ್ಡಿಎಕ್ಸ್ 01 (ಚೇಸರ್) ಮತ್ತು ಎಸ್ಡಿಎಕ್ಸ್ 02 (ಟಾರ್ಗೆಟ್) ಎಂಬ ಎರಡು ಉಪಗ್ರಹಗಳು ಉತ್ತಮ ಸ್ಥಿತಿಯಲ್ಲಿವೆ ಎಂದೂ ತಿಳಿಸಿದೆ.

‘15 ಮೀಟರ್ಗಳ ಅಂತರದಲ್ಲಿ ಎರಡೂ ಉಪಗ್ರಹಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಉಪಗ್ರಹಗಳ ಅತ್ಯಾಕರ್ಷಕ ಹ್ಯಾಂಡ್ಶೇಕ್ಗಾಗಿ ನಾವು ಕೇವಲ 50 ಅಡಿ ದೂರದಲ್ಲಿದ್ದೇವೆ’ಎಂದು ಇಸ್ರೊ ಎಕ್ಸ್ ಪೋಸ್ಟ್ನಲ್ಲಿ ಮಾಹಿತಿ ನೀಡಿದೆ.

ಡಿಸೆಂಬರ್ 30ರಂದು ಆರಂಭವಾದ ಈ ಮಿಷನ್ ಅಡಿ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್(ಜೋಡಣೆ) ಅನ್ನು ಪ್ರದರ್ಶಿಸುವ ಗುರಿಯನ್ನು ಹೊಂದಲಾಗಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 220 ಕೆ.ಜಿ ತೂಕದ ಎರಡು ಉಪಗ್ರಹಗಳನ್ನು ಹೊತ್ತೊಯ್ದಿದ್ದ ಪಿಎಸ್ಎಲ್ವಿ ಸಿ 60 ರಾಕೆಟ್, 475 ಕಿ. ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿದೆ.

‘ಸ್ಪೇಡೆಕ್ಸ್’ ಯೋಜನೆಯ ಯಶಸ್ಸು ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವುದು ಮುಂತಾದ ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕ ಸಂಕೀರ್ಣ ತಂತ್ರಜ್ಞಾನಗಳಿಗೆ ದೇಶಕ್ಕೆ ನೆರವಾಗಲಿದೆ. ಜೊತೆಗೆ ಈ ಸಾಧನೆ ಮಾಡಿದ 4ನೇ ದೇಶವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.