ದಿನ ಭವಿಷ್ಯ: ಈ ರಾಶಿಯವರಿಗೆ ವ್ಯವಹಾರದಲ್ಲಿ ಉತ್ತಮ ಲಾಭವಿರುವುದು
Published 17 ಅಕ್ಟೋಬರ್ 2025, 1:27 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪ್ರಯಾಣದ ಅವಕಾಶ ಒದಗಿ ಬರಬಹುದು. ಮನೆಯ ವಿಷಯಗಳತ್ತ ಹೆಚ್ಚಿನ ಗಮನಹರಿಸ ಬೇಕಾಗುತ್ತದೆ. ವ್ಯವಹಾರದ ಅಭಿವೃದ್ಧಿಗೆ ಒಳ್ಳೆಯ ಪಾಲುದಾರರೊಬ್ಬರು ದೊರೆಯಲಿದ್ದಾರೆ.
ವೃಷಭ
ಎದುರಾಗಿರುವ ಸಂದಿಗ್ಧ ಪರಿಸ್ಥಿತಿ ಮಾರ್ಗದರ್ಶಕರ ಸಲಹೆ ಪಡೆದು ನಿಭಾಯಿಸುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಅಸ್ಥಿರತೆ ಎದುರಾಗುವುದು. ಗುರಿಯನ್ನು ಸಾಧಿಸುವ ಬಗ್ಗೆ ಮಾತ್ರ ಗಮನವಿರಲಿ.
ಮಿಥುನ
ವಿವಾಹ ವಿಷಯಗಳು ನಿಶ್ಚಿತಗೊಂಡಿದ್ದರೂ ದೃಢಪಡಿಸಿಕೊಳ್ಳುವುದು ಉತ್ತಮ ಅನಿಸುತ್ತದೆ. ಮುಕ್ತ ಮಾತುಕತೆಗಳಿಂದ ವ್ಯವಹಾರ ಸಿಗುತ್ತದೆ. ಮಾಧ್ಯಮ ಸಂಸ್ಥೆಗಳವರಿಗೆ ಉತ್ತಮ ದಿನ.
ಕರ್ಕಾಟಕ
ಹೆಚ್ಚಿನ ಉತ್ಸಾಹ ಕಾಣಿಸುತ್ತಿದ್ದು ಹೊಸದೊಂದು ಹಾದಿಯಲ್ಲಿ ನಡೆಯಲಿದ್ದೀರಿ. ಹವಾಮಾನ ಬದಲಾವಣೆ ಆರೋಗ್ಯದ ಮತ್ತು ಮನಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ. ಸುಬ್ರಹ್ಮಣ್ಯನ ಸೇವೆಯಿಂದ ಶುಭಪ್ರಾಪ್ತಿ.
ಸಿಂಹ
ಬರುವ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವಿರಿ. ಎಲೆಕ್ಟ್ರಿಕಲ್ ಕಂಟ್ರಾಕ್ಟರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ ವೃತ್ತಿ ಮತ್ತು ಸಹ-ಕೆಲಸಗಾರರತ್ತ ಗಮನಹರಿಸಿ.
ಕನ್ಯಾ
ಕಾರ್ಯರಂಗದಲ್ಲಿ ಶ್ರದ್ಧೆಗೆ ಮತ್ತು ಶ್ರಮಕ್ಕೆ ತಕ್ಕ ಫಲ ನಿರೀಕ್ಷಿಸಬಹುದು. ನಿಜ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ವ್ಯವಹಾರದಲ್ಲಿ ಉತ್ತಮ ಲಾಭವಿರುವುದು.
ತುಲಾ
ವಿನಾಶಕಾರಿ ಪ್ರವೃತ್ತಿಗಳನ್ನು ದ್ವೇಷಿಗಳೇ ಆಗಿದ್ದರೂ ಪ್ರಯೋಗಿಸುವ ಯೋಚನೆ ಮಾಡದಿರಿ. ಸಂಸಾರ ನಿರ್ವಹಣೆಯ ವಿಷಯದಲ್ಲಿ ಖಚಿತ ನಿರ್ಧಾರ ತೆಗೆದುಕೊಳ್ಳಬೇಕಾಗುವುದು. ವ್ಯವಹಾರದಲ್ಲಿ ಚಾಣಾಕ್ಷತನ ಇರಲಿ.
ವೃಶ್ಚಿಕ
ಕರಗತವಾಗಿರುವ ಕೆಲಸವನ್ನೇ ಮಾಡಲು ಹೇಳಿದಾಗ ಗಡಿಬಿಡಿಯ ಕಾರಣವಾಗಿ ವ್ಯತ್ಯಾಸಗಳಾಗಬಹುದು. ಮನೆ ಸ್ವಚ್ಛತಾ ಪ್ರಕ್ರಿಯೆಯಲ್ಲಿ ಹಳೆ ನೆನಪನ್ನು ಮರುಕಳಿಸುವಂಥ ವಸ್ತುಗಳು ಲಭ್ಯವಾಗುತ್ತವೆ.
ಧನು
ಉನ್ನತ ವ್ಯಾಸಂಗದ ವಿಚಾರದಲ್ಲಿ ನಿಮ್ಮ ನಿಲುವನ್ನು ತಿಳಿಸಿ. ಸಾಮರಸ್ಯದ ಬದುಕನ್ನು ಮಕ್ಕಳಿಗೆ ಮನವರಿಕೆ ಮಾಡದ ಹೊರತು ಕೌಟುಂಬಿಕ ಕಲಹಗಳು ಇತ್ಯರ್ಥವಾಗದು.
ಮಕರ
ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದಲ್ಲಿ ಪರಿಹಾರವಾಗುವುದು. ಕಠಿಣ ದಿನವಾಗಿರುತ್ತದೆ. ಮನೋನಿಯಂತ್ರಣದಿಂದ ಆರೋಗ್ಯವನ್ನು ಮತ್ತು ಮನಸ್ಸಿನ ಅಸಮಾಧಾನಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.
ಕುಂಭ
ಎಲ್ಲಾ ವಿಷಯಗಳಲ್ಲೂ ಮುಂದಾಲೋಚನೆ ಹಾಗೂ ವಿವೇಚನೆಯಿಂದ ನಡೆದುಕೊಂಡಲ್ಲಿ ಹೆಚ್ಚಿನ ಏಳಿಗೆ, ಯಶಸ್ಸು ಸಿಗಲಿದೆ. ದಿನದ ಆರಂಭದಲ್ಲಿ ವಿಪರೀತ ಶ್ರಮ ಪಡಬೇಕಾಗಿ ಬರುವುದು. ವ್ಯಾಪಾರದಲ್ಲಿ ಲಾಭವಿದೆ.
ಮೀನ
ಪ್ರಕೃತಿಯ ಸಣ್ಣ ಸಣ್ಣ ಬದಲಾವಣೆಗಳನ್ನು ಗಮನಿಸಿ ಬರೆದಂಥ ಕಾವ್ಯವು ಜನಮಾನಸವನ್ನು ಗೆಲ್ಲಲಿದೆ. ವೃತ್ತಿ ವಿಷಯಗಳಲ್ಲಿ ಬಯಸದೇ ಸದವಕಾಶ ಎದುರಾಗುತ್ತದೆ. ಬಂದಂತಹ ಅವಕಾಶಗಳಿಂದ ತಪ್ಪಿಸಿಕೊಳ್ಳಬೇಡಿ.