ನವದೆಹಲಿ: ರೋಮಾಂಚಕವಾಗಿದ್ದ ಟೈಬ್ರೇಕರ್ನಲ್ಲಿ ಬೆಂಗಳೂರು ಬುಲ್ಸ್ಗೆ ಮತ್ತೊಮ್ಮೆ ನಿರಾಸೆ ಕಾಡಿತು. ಈ ಬಾರಿ ಪ್ರೊ ಕಬಡ್ಡಿ ಲೀಗ್ನಲ್ಲಿ ಪಟ್ನಾ ಪೈರೇಟ್ಸ್ ತಂಡ ಟೈಬ್ರೇಕರ್ನಲ್ಲಿ ಬುಲ್ಸ್ ತಂಡವನ್ನು 6–5ರಿಂದ ಸೋಲಿಸಿತು. ಗುರುವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ನಿಗದಿತ ಅವಧಿಯ ಆಟ 38–38ರಲ್ಲಿ ಸಮಬಲಗೊಂಡಿತ್ತು.

ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಅಯಾನ್ ಲೋಚಬ್ ಅವರ ಸೂಪರ್ ಟೆನ್ ಮತ್ತು ನವದೀಪ್ ಅವರ ನಾಲ್ಕು ಟ್ಯಾಕಲ್ಗಳು ಪಟ್ನಾ ಆಟದ ಹೈಲೈಟ್. ಆದರೆ
ಟೈಬ್ರೇಕರ್ನಲ್ಲಿ ಮನದೀಪ್ ಅವರು ರೇಡಿಂಗ್ನಲ್ಲಿ ಒಮ್ಮೆಯೇ ಎರಡು ಪಾಯಿಂಟ್ಸ್ ಹೆಕ್ಕಿದ್ದು ನಿರ್ಣಾಯಕವಾಯಿತು. ಬೆಂಗಳೂರು ಪರ ಅಲಿರೇಝಾ ಅವರು ಒಂಬತ್ತನೇ ಬಾರಿ ಸೂಪರ್ ಟೆನ್ ಸಾಧನೆ ದಾಖಲಿಸಿದರು.

ಬುಲ್ಸ್ಗೆ ಇದು 15 ಪಂದ್ಯಗಳಲ್ಲಿ ಏಳನೇ ಸೋಲು. ಎಂಟು ಪಂದ್ಯ ಗೆದ್ದಿರುವ ಯೋಗೇಶ್ ಬಳಗ 16 ಪಾಯಿಂಟ್ಗಳೊಡನೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಗೆಲುವಿನ ಹೊರತಾಗಿಯೂ ಪಟ್ನಾ ಕೊನೆಯ ಸ್ಥಾನದಲ್ಲೇ ಇದೆ. ಅದು 14 ಪಂದ್ಯಗಳಲ್ಲಿ ನಾಲ್ಕರಲ್ಲಷ್ಟೇ ಗೆಲುವು ಕಂಡಿದೆ.

ದಿನದ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ತಂಡ 33–26 ಪಾಯಿಂಟ್ಗಳಿಂದ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಸಾಂಘಿಕ ಆಟವಾಡಿದ ಹರಿಯಾಣ ಸ್ಟೀಲರ್ಸ್ ತಂಡವು 53–26ರಲ್ಲಿ ಯುಪಿ ಯೋಧಾಸ್ ತಂಡವನ್ನು ಸುಲಭವಾಗಿ ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.