ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಶ್ಮೀರ|ವೈಷ್ಣೋದೇವಿ ದೇಗುಲದ ಬಳಿ ಭೂಕುಸಿತ; ಇಬ್ಬರು ಮಹಿಳಾ ಯಾತ್ರಾರ್ಥಿಗಳು ಸಾವು

Published : 2 ಸೆಪ್ಟೆಂಬರ್ 2024, 11:43 IST
Last Updated : 2 ಸೆಪ್ಟೆಂಬರ್ 2024, 11:43 IST
ಫಾಲೋ ಮಾಡಿ
Comments

ಕತ್ರಾ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಶ್ರೀಮಾತಾ ವೈಷ್ಣೋ ದೇವಿ ದೇವಾಲಯದ ನೂತನ ಚಾರಣ ಮಾರ್ಗದಲ್ಲಿ ಸೋಮವಾರ ಸಂಭವಿಸಿದ ಭೂಕುಸಿತದಿಂದ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

ಮೃತಪಟ್ಟ ಮಹಿಳೆಯರನ್ನು ಪಂಜಾಬ್‌ನ ಗುರುದಾಸಪುರದ ಸಪ್ನಾ(27) ಹಾಗೂ ಉತ್ತರ ಪ್ರದೇಶದ ಕಾನ್ಪುರದ ನೇಹಾ(23) ಎಂದು ಗುರುತಿಸಲಾಗಿದೆ. ಕಾನ್ಪುರದ 5 ವರ್ಷದ ಬಾಲಕಿಯೊಬ್ಬಳು ಗಾಯಗೊಂಡಿದ್ದು, ಶ್ರೀಮಾತಾ ವೈಷ್ಣೋ ದೇವಿ ನಾರಾಯಣ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೂತನವಾಗಿ ನಿರ್ಮಿಸಲಾಗಿದ್ದ ‘ಹಿಮಕೋಟಿ’ ಮಾರ್ಗವನ್ನು ಭೂಕುಸಿತದ ಬಳಿಕ ‌ಮುಚ್ಚಲಾಗಿದೆ. ಸಾಂಪ್ರದಾಯಿಕವಾದ ‘ಸಾಂಝಿ ಛತ್‌’ ಮಾರ್ಗದಲ್ಲಿ ಸಂಚರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ರಿಯಾಸಿ ಜಿಲ್ಲಾಧಿಕಾರಿ ವಿಶೇಷ್‌ ಪೌಲ್‌ ಮಹಾಜನ್‌ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಇತ್ತೀಚೆಗೆ ಭಾರಿ ಮಳೆಯಾಗುತ್ತಿರುವುದು ಭೂಕುಸಿತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ವಿಪತ್ತು ನಿರ್ವಹಣಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ ಎಂದು ಹೇಳಿದ್ದಾರೆ.

‘ಚಾರಣದ ಮಧ್ಯೆ ವಿರಾಮಕ್ಕೆಂದು ಚಾವಡಿಯ ಅಡಿಯಲ್ಲಿ ಕುಳಿತ್ತಿದ್ದೆವು. ಆಗ ಏಕಾಏಕಿ ಭೂಕುಸಿತವುಂಟಾಗಿ ಅವಶೇಷಗಳು ಛಾವಣಿಯ ಮೇಲೆ ಉರುಳಿದವು’ ಎಂದು ಗಾಯಾಳು ಬಾಲಕಿಯ ಅಜ್ಜ ಹೇಳಿದ್ದಾರೆ.

₹5 ಲಕ್ಷ ಪರಿಹಾರ: ‘ವೈಷ್ಣೋ ದೇವಿ ದೇವಾಲಯದ ಚಾರಣ ಮಾರ್ಗದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹5 ಲಕ್ಷ ಪರಿಹಾರವನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT