ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಜೋಡಣೆ: ಮೊಬೈಲ್‌ ಸಂಖ್ಯೆ ಪರಿಶೀಲನೆಗೆ ಅವಕಾಶ

Published 2 ಮೇ 2023, 15:59 IST
Last Updated 2 ಮೇ 2023, 15:59 IST
ಅಕ್ಷರ ಗಾತ್ರ

ನವದೆಹಲಿ: ಆಧಾರ್ ಹೊಂದಿರುವವರು, ಆಧಾರ್‌ಗೆ ಜೋಡಿಸಿರುವ ತಮ್ಮ ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ವಿಳಾಸ ಸರಿ ಇದೆಯೇ ಎಂಬುದನ್ನು ಪರಿಸೀಲಿಸಿಕೊಳ್ಳುವ ವ್ಯವಸ್ಥೆಯನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಜಾರಿಗೆ ತಂದಿದೆ.

ಆಧಾರ್ ಜತೆಗೆ ತಪ್ಪಾದ ಅಥವಾ ಬಳಕೆಯಲ್ಲಿ ಇಲ್ಲದ ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ವಿಳಾಸ ಜೋಡಣೆಯಾಗಿದ್ದರೆ, ಅಧಾರ್ ದೃಢೀಕರಣದ ವೇಳೆ ತೊಂದರೆಯಾಗುತ್ತದೆ. ಆಧಾರ್ ದೃಢೀಕರಣದ ವೇಳೆ ಒಟಿಪಿ ಬೇರೆ ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ಗೆ ಹೋದರೆ, ದೃಢೀಕರಣ ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಯುಐಡಿಎಐ ಹೇಳಿದೆ.

myaadhaar.uidai.gov.in ಜಾಲತಾಣದಲ್ಲಿ ಅಥವಾ mAadhaar ಅಪ್ಲಿಕೇಷನ್‌ನಲ್ಲಿ, ‘Verify email/mobile Number’ ವಿಭಾಗದಲ್ಲಿ ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್ ವಿಳಾಸವನ್ನು ಪರಿಶೀಲಿಸಿಕೊಳ್ಳಬಹುದು. ಆ ಮಾಹಿತಿ ತಪ್ಪಾಗಿದ್ದರೆ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ, ಸರಿಯಾದ ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ವಿಳಾಸವನ್ನು ಸೇರಿಸಬಹುದು ಎಂದು ಯುಐಡಿಎಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT