ಯುದ್ಧಗಳು ಹಾಗೂ ಪ್ರಕೃತಿ ವಿಕೋಪಗಳು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು, ಆಫ್ರಿಕಾದಲ್ಲಿ ಹೆಚ್ಚು ಜನ ಹಸಿವಿಗೆ ತುತ್ತಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ವರದಿ ಹೇಳಿದೆ.ಯೆಮನ್, ಕಾಂಗೊ ಗಣರಾಜ್ಯ, ಅಫ್ಗಾನಿಸ್ತಾನ ಮತ್ತು ಸಿರಿಯಾ ಸೇರಿದಂತೆ ಎಂಟು ದೇಶಗಳಲ್ಲಿ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ.