ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 28ರಂದು ಆರಂಭವಾಗಿ ಏಪ್ರಿಲ್ 2 ರಂದು ಕೊನೆಗೊಳ್ಳಲಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗಲಿದೆ.

ವಾಡಿಕೆಯಂತೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 28ರಂದು ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಜಂಟಿ ಸಭೆ ಉದ್ದೇಶಿಸಿ ಮಾಡುವ ಭಾಷಣದೊಂದಿಗೆ ಅಧಿವೇಶನ ಆರಂಭವಾಗುತ್ತದೆ.

‘ಭಾರತ ಸರ್ಕಾರದ ಶಿಫಾರಸಿನ ಮೇರೆಗೆ, ದ್ರೌಪದಿ ಮುರ್ಮು ಅವರು ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಎರಡೂ ಸದನಗಳನ್ನು ಕರೆಯಲು ಅನುಮೋದನೆ ನೀಡಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ‘ಎಕ್ಸ್‘ನಲ್ಲಿ ತಿಳಿಸಿದ್ದಾರೆ.

ಅಧಿವೇಶನದ ಮೊದಲ ಹಂತವು ಜನವರಿ 28ರಿಂದ ಫೆಬ್ರವರಿ 13ರವರೆಗೆ, ಎರಡನೇ ಹಂತವು ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ.

ಆರ್ಥಿಕ ಸಮೀಕ್ಷೆ ಹಾಗೂ ಬಜೆಟ್ ಮಂಡನೆಯ ದಿನಾಂಕಗಳನ್ನು ರಿಜಿಜು ಟ್ವೀಟ್ನಲ್ಲಿ ಉಲ್ಲೇಖಿಸಿಲ್ಲ. ಸಾಮಾನ್ಯವಾಗಿ ಬಜೆಟ್ ಅನ್ನು ಫೆಬ್ರುವರಿ 1 ರಂದು ಮಂಡಿಸಲಾಗುತ್ತದೆ. ಈ ಬಾರಿ ಫೆ.1 ಭಾನುವಾರ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.