ಪ್ರಯಾಗರಾಜ್: ವಯಸ್ಕ ಪೋಷಕರು ಅವಿವಾಹಿತರಾದರೂ ಒಟ್ಟಿಗೆ ವಾಸಿಸಬಹುದು ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್, ಬೆದರಿಕೆ ಎದುರಿಸುತ್ತಿರುವ ಅಂತರಧರ್ಮೀಯ ದಂಪತಿಯ ಭದ್ರತೆಯನ್ನು ಪರಿಶೀಲಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಅಂತರಧರ್ಮೀಯ ಪೋಷಕರ ಅಪ್ರಾಪ್ತ ವಯಸ್ಸಿನ ಮಗಳು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಶೇಖರ್ ಬಿ.ಸರಾಫ್ ಮತ್ತು ವಿಪಿನ್ಚಂದ್ರ ದೀಕ್ಷಿತ್ ಅವರನ್ನೊಳಗೊಂಡ ಪೀಠವು, ‘ಮಗುವಿನ ತಂದೆ ಮತ್ತು ತಾಯಿ ಭಿನ್ನ ಧರ್ಮದವರಾಗಿದ್ದು, 2018ರಿಂದಲೂ ಒಟ್ಟಿಗೆ ವಾಸಿಸುತ್ತಿದ್ದಾರೆ’ ಎಂದು ಹೇಳಿತು.

ಮಗುವಿನ ತಾಯಿಯು ಆಕೆಯ ಪತಿಯ ಮರಣದ ನಂತರ ಅನ್ಯ ಧರ್ಮದ ವ್ಯಕ್ತಿಯ ಜತೆ ವಾಸಿಸಲು ತೊಡಗಿದ್ದರು. ಅದಕ್ಕೆ ಆಕೆ ಹಿಂದಿನ ಅತ್ತೆ–ಮಾವ ಅವರಿಂದ ಬೆದರಿಕೆ ಎದುರಿಸುತ್ತಿದ್ದಾರೆ.

‘ಬೆದರಿಕೆ ಇರುವ ಕಾರಣ ಮಗುವಿನ ಪೋಷಕರು ಭಯಭೀತರಾಗಿದ್ದಾರೆ. ವಯಸ್ಕ ಪೋಷಕರು ಮದುವೆಯಾಗದಿದ್ದರೂ ಒಟ್ಟಿಗೆ ಜೀವಿಸಲು ಸಂವಿಧಾನವು ಅವಕಾಶ ನೀಡುತ್ತದೆ’ ಎಂದು ಹೈಕೋರ್ಟ್ ಏಪ್ರಿಲ್ 8ರ ತನ್ನ ಆದೇಶದಲ್ಲಿ ತಿಳಿಸಿದೆ.

ಕಾನೂನಿನ ಪ್ರಕಾರ ಮಗುವಿಗೆ ಮತ್ತು ಪೋಷಕರಿಗೆ ಭದ್ರತೆಯನ್ನು ಒದಗಿಸಬೇಕೇ ಎಂಬುದನ್ನು ಪರಿಶೀಲಿಸುವಂತೆ ಸಂಭಾಲ್ನ ಎಸ್ಪಿಗೆ ಪೀಠವು ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.