ಲಖನೌ: ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಕಾನೂನುಬಾಹಿರ ಮತಾಂತರ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗಿದ್ದು, ಇಂದು (ಮಂಗಳವಾರ) ಅಂಗೀಕಾರವಾಗುವ ಸಾಧ್ಯತೆ ಇದೆ.

ಈ ತಿದ್ದುಪಡಿ ಮಸೂದೆಯಡಿ ಒಬ್ಬ ವ್ಯಕ್ತಿಯನ್ನು ಬೆದರಿಕೆ ಹಾಕಿ ಮತಾಂತರ ಮಾಡಿದರೆ, ಮದುವೆಯಾಗುವುದಾಗಿ ಭರವಸೆ ನೀಡಿ ಸಂಚು ಮಾಡಿದರೆ, ಅಪ್ರಾಪ್ತರನ್ನು ಅಥವಾ ಮಹಿಳೆಯರನ್ನು ನಂಬಿಸಿ ಮಾನವ ಕಳ್ಳ ಸಾಗಣೆಗೆ ಮಾಡುವ ವ್ಯಕ್ತಿಗಳ ವಿರುದ್ಧ ಗಂಭೀರ ಪ್ರಕರಣಗಳೆಂದು ಪರಿಗಣಿಸಲಾಗುವುದು.
.ಸರಣಿ ರೈಲು ಅಪಘಾತ: ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ.ಕಮಲಾ ಹ್ಯಾರಿಸ್, ಬೈಡನ್ಗಿಂತಲೂ ಕೆಟ್ಟ ಅಭ್ಯರ್ಥಿ: ಡೊನಾಲ್ಡ್ ಟ್ರಂಪ್.
ಮತಾಂತರ ತಿದ್ದುಪಡಿ ಕಾಯ್ದೆಯಡಿ ನಿಯಮ ಉಲ್ಲಂಘಿಸಿದರೆ 20 ವರ್ಷಗಳ ಜೈಲು ಅಥವಾ ಜೀವಾವಧಿ ಶಿಕ್ಷೆ ಮತ್ತು ₹5 ಲಕ್ಷ ದಂಡವನ್ನು ವಿಧಿಸಲಾಗುತ್ತದೆ. ಈ ಹಿಂದಿನ ಕಾಯ್ದೆ ಪ್ರಕಾರ, 10 ವರ್ಷ ಜೈಲು, 50 ಸಾವಿರ ದಂಡ ವಿಧಿಸಲಾಗುತ್ತಿತ್ತು.

ಯಾವುದೇ ವ್ಯಕ್ತಿಯು ಕಾನೂನುಬಾಹಿರ ಮತಾಂತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಬಹುದು. ಈ ಹಿಂದೆ ಪ್ರಕರಣ ಸಂಬಂಧ ದೂರು ದಾಖಲಿಸಲು ಸಂತ್ರಸ್ತೆಯ ಜತೆಗೆ ಪೋಷಕರು, ಒಡಹುಟ್ಟಿದವರ ಉಪಸ್ಥಿತಿ ಅಗತ್ಯವಾಗಿತ್ತು.
.ಭೂಕುಸಿತ | ನೂರಾರು ಮಂದಿ ಸಿಲುಕಿರುವ ಶಂಕೆ: ಕೇರಳ ಸಿಎಂ ಪಿಣರಾಯಿ ವಿಜಯನ್.ಟಿ20 ಸರಣಿ | ಲಂಕಾ ವಿರುದ್ಧ ಅಂತಿಮ ಪಂದ್ಯ ಇಂದು: ಭಾರತಕ್ಕೆ ಕ್ಲೀನ್ಸ್ವೀಪ್ ಗುರಿ.
ಅಂತಹ ಪ್ರಕರಣಗಳನ್ನು ಸೆಷನ್ಸ್ ನ್ಯಾಯಾಲಯದ ಕೆಳಗಿನ ಯಾವುದೇ ನ್ಯಾಯಾಲಯವು ವಿಚಾರಣೆ ನಡೆಸುವುದಿಲ್ಲ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ಗೆ ಅವಕಾಶ ನೀಡದೆ ಜಾಮೀನು ಅರ್ಜಿಯನ್ನು ಪರಿಗಣಿಸುವುದಿಲ್ಲ. ಈ ಪ್ರಕರಣದಡಿ ಬರುವ ಎಲ್ಲಾ ಅಪರಾಧಗಳನ್ನು ಜಾಮೀನು ರಹಿತವಾಗಿದೆ ಎಂದು ಪ್ರಸ್ತಾಪಿಸಲಾಗಿದೆ.

ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ ಅವರು ಸೋಮವಾರ (ಜುಲೈ29) ಸದನದಲ್ಲಿ ಮಸೂದೆಯನ್ನು ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.