ಝಾನ್ಸಿ(ಉತ್ತರ ಪ್ರದೇಶ): ಮೊಘಲ್ ಚಕ್ರವರ್ತಿ ಬಾಬರ್ ಹೆಸರಿನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾರ್ಯ ನಡೆದರೆ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಅವರು ಶನಿವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಮಾದರಿಯಲ್ಲಿ ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಿದ ನಂತರ ಮೌರ್ಯ ಅವರ ಪ್ರತಿಕ್ರಿಯೆ ಬಂದಿದೆ.

'ಮಸೀದಿ ನಿರ್ಮಾಣದಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಯಾರಾದರೂ ಬಾಬರ್ ಹೆಸರಿನಲ್ಲಿ ಅದನ್ನು ನಿರ್ಮಿಸಿದರೆ, ನಾವು ಅದನ್ನು ವಿರೋಧಿಸುವುದಲ್ಲದೆ, ತ್ವರಿತವಾಗಿ ಕೆಡವಲಾಗುವುದು’ಎಂದು ಅವರು ತಿಳಿಸಿದ್ದಾರೆ.

ಇದೇವೇಳೆ, ಸಮಾಜವಾದಿ ಪಕ್ಷವನ್ನು(ಎಸ್ಪಿ) ಮೌರ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಬಿಹಾರ ಚುನಾವಣೆಯಲ್ಲಿ ಅವಮಾನಕರ ಸೋಲನ್ನು ಅನುಭವಿಸಿದ ನಂತರ ಅದರ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ಹಿಡಿತವನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

‘ಬಿಹಾರದಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ಎಸ್ಪಿ ಮುಖ್ಯಸ್ಥರ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಅವರು ಈಗ ಅವಾಸ್ತವಿಕ ಕನಸುಗಳಲ್ಲಿ ಮುಳುಗಿದ್ದಾರೆ’ಎಂದು ಟೀಕಿಸಿದ್ದಾರೆ.

2024ರ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ ಕೆಲ ಕ್ಷೇತ್ರಗಳಲ್ಲಾದರೂ ಗೆದ್ದಿದೆ. 2027ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪಕ್ಷವು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಸ್ಥಿತಿಯಲ್ಲಿಯೂ ಇರುವುದಿಲ್ಲ ಎಂದು ಉಪಮುಖ್ಯಮಂತ್ರಿ ಒತ್ತಿ ಹೇಳಿದ್ದಾರೆ.
.1528ರಿಂದ 2024: ಬಾಬರಿ ಮಸೀದಿಯಿಂದ ರಾಮ ಮಂದಿರ ನಿರ್ಮಾಣದವರೆಗಿನ ಚಿತ್ರಣ .ಬಾಬರಿ ಮಸೀದಿ ಧ್ವಂಸಕ್ಕೆ 33 ವರ್ಷ: ಹಲವೆಡೆ ಕಟ್ಟೆಚ್ಚರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.