ಮುಜಫರ್ನಗರ/ಮೀರತ್: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಶಿರಚ್ಛೇದ ಮಾಡಿದವರಿಗೆ ಬಹುಮಾನ ನೀಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಅಮಿತ್ ಚೌಧರಿ ಎಂದು ಗುರುತಿಸಲಾಗಿದೆ.

‘ಟಿಕಾಯತ್ ಶಿರಚ್ಛೇದ ಮಾಡಿದವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಆರೋಪಿ ಪೋಸ್ಟ್ ಮಾಡಿದ್ದ ವಿಡಿಯೊದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
.US: ಜಗತ್ತು ಜನಸಂಖ್ಯೆಯಿಂದ ತುಂಬಿರಬಾರದು ಎಂದು ಹೆರಿಗೆ ಆಸ್ಪತ್ರೆಗೆ ಬಾಂಬ್ ಇಟ್ಟ!.ಬಲವಂತದ ಮತಾಂತರವನ್ನು ನಮ್ಮ ಸಂವಿಧಾನ ಒಪ್ಪುವುದಿಲ್ಲ: ಅಲಹಾಬಾದ್ ಹೈಕೋರ್ಟ್.
ಚೌಧರಿ ಮಾಡಿದ್ದ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹರಿದಾಡಿತ್ತು. ಮುಜಫರ್ನಗರ ಮತ್ತು ಮೀರತ್ನಲ್ಲಿ ಟಿಕಾಯತ್ ಅಭಿಮಾನಿಗಳು ಜಮಾಯಿಸಿ, ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆಗಳು ನಡೆಸಿದ್ದರು.

ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಎಫ್ಐಆರ್ಗೆ ಸಂಬಂಧಿಸಿದಂತೆ ಮುಜಫರ್ನಗರ ಮತ್ತು ಮೀರತ್ ಜಿಲ್ಲೆಗಳ ಪೊಲೀಸರು ಹೇಳಿಕೆ ನೀಡಿದ್ದು, ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಿಲ್ಲ. ಟಿಕಾಯತ್ ವಿರುದ್ಧ ಆರೋಪಿ ಅಂತಹ ಹೇಳಿಕೆಗಳನ್ನು ನೀಡಲು ಕಾರಣಗಳೇನು ಎಂಬುವುದು ಇನ್ನೂ ತಿಳಿದು ಬಂದಿಲ್ಲ.
.ಅಮೆರಿಕದ ಮಾಜಿ ಅಧ್ಯಕ್ಷ 82 ವರ್ಷದ ಜೋ ಬೈಡನ್ಗೆ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ.ಪ್ರೊಫೆಸರ್ ಖಾನ್ ಬಂಧನ ಪ್ರಶ್ನಿಸಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ.ಕರ್ನೂಲ್ ಬಳಿ ಕಾರು ಅಪಘಾತ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂವರು ಯುವಕರ ಸಾವು.ಪಾತ್ರದಲ್ಲಿ ಗಟ್ಟಿತನವಿರಬೇಕು.. ಪ್ರಜಾವಾಣಿಯೊಂದಿಗೆ ಮೇಘನಾ ಗಾಂವ್ಕರ್ ಮಾತುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.