ಲಖನೌ: ಉತ್ತರ ಪ್ರದೇಶದ ಲಖಿಂಪುರ್–ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾವಿಚಾರಣೆಗೆ ಹಾಜರಾಗಿದ್ದಾರೆ.

ನಿನ್ನೆ ಸಮನ್ಸ್ ನೀಡಿದರೂ ವಿಚಾರಣೆಗೆ ಗೈರಾಗಿದ್ದ ಆಶಿಶ್ ಮಿಶ್ರಾ, ಬೆಳಗ್ಗೆ ಲಖಿಂಪುರ್–ಖೇರಿ ಅಪರಾಧ ದಳ ವಿಭಾಗದ ಕಚೇರಿಯಲ್ಲಿ ಎಸ್‌ಐಟಿಮುಂದೆ ಹಾಜರಾದರು. ಅಶಿಶ್ ಮಿಶ್ರಾ ಆಗಮನದ ವೇಳೆ ಭಾರೀ ಜನಜಂಗುಳಿ ಇತ್ತು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಜೀಪು ಹರಿಸಿ, ರೈತರ ಹತ್ಯೆ ಮಾಡಿದ್ದಾರೆ ಎಂದು ಮೃತ ರೈತರ ಮನೆಯವರು ಪ್ರಕರಣ ದಾಖಲಿಸಿದ್ದರು. ಆ ಎಫ್‌ಐಆರ್ ಅನ್ವಯ ಗುರುವಾರವೇ ಆಶಿಶ್ ಮಿಶ್ರಾ ಅವರಿಗೆ ನೋಟಿಸ್ ನೀಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ಬಳಿಕ ಮತ್ತೊಂದು ಸಮನ್ಸ್ ನೀಡಲಾಗಿತ್ತು.

ಓದಿ..ಲಖಿಂಪುರ–ಖೇರಿಯಲ್ಲಿ ರೈತರ ಮೇಲೆ ಹರಿದ ವಾಹನ; ವಿಡಿಯೊ ವೈರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.