ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಮೆಲ್ವಿಲ್ಲೆಯ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯವನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸಂಸದರು ಒತ್ತಾಯಿಸಿದ್ದಾರೆ.
ಯಾವುದೇ ರೀತಿಯ ದ್ವೇಷದ ವಿರುದ್ಧ ಅಮೆರಿಕ ಒಟ್ಟಾಗಿ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ.
ದೇವಸ್ಥಾನದಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ನಸೌ ವೆಟರನ್ಸ್ ಮೆಮೊರಿಯಲ್ ಕೊಲಿಸಿಯಂನಲ್ಲಿ ಇದೇ 22ರಂದು ನಡೆಯಲಿರುವ ಹಿಂದೂ ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ವೇಳೆಯೇ ದೇವಸ್ಥಾನ ವಿರೂಪಗೊಳಿಸುವಂಥ ಘಟನೆ ನಡೆದಿದೆ.
ಇದು ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿರುವ ಕೃತ್ಯ ಎಂದು ದೇವಾಲಯ ಸಮಿತಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
‘ಈ ದಿನ ಸ್ಥಳೀಯ, ರಾಜ್ಯ ಮತ್ತು ಫೆಡರಲ್ ನಾಯಕರು ಶಾಂತಿ, ಗೌರವ ಮತ್ತು ಏಕತೆಯನ್ನು ಸಾರಲು ಒಟ್ಟಾಗಿದ್ದಾರೆ. ನಾವೆಲ್ಲರೂ ದ್ವೇಷದ ವಿರುದ್ಧ ಒಟ್ಟಾಗಿ ನಿಲ್ಲಲಿದ್ದೇವೆ’ ಎಂದು ದೇವಾಲಯದ ಆಡಳಿತ ಮಂಡಳಿ ಪೋಸ್ಟ್ ಮಾಡಿದೆ.
ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರ ಧರ್ಮಾಂಧತೆ ಹೆಚ್ಚುತ್ತಿದೆ. ಅಮೆರಿಕನ್ನರು ಎಲ್ಲಾ ರೀತಿಯ ದ್ವೇಷದ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು