ಇಟಾವಾ(ಉತ್ತರ ಪ್ರದೇಶ): ಚಂಬಲ್ ಕಣಿವೆಯ ಕುವಾರಿ ನದಿಯಲ್ಲಿ ತಂದೆಯ ಅಸ್ಥಿ ವಿಸರ್ಜಿಸಲು ತೆರಳಿದ್ದ ವೇಳೆ ಮಗನೇ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವಿನೋದ್ ತಿವಾರಿ ಅವರ ಅಸ್ಥಿ ವಿಸರ್ಜಿಸಲು ಅವರ ಮಗ ಸಂತೋಷ್ ಕುಮಾರ್ ತಿವಾರಿ(22) ಮಂಗಳವಾರ ಕುವಾರಿ ನದಿ ಬಳಿ ತೆರಳಿದ್ದಾಗ ಘಟನೆ ಜರುಗಿದೆ.

ತಂದೆಯ ಅಸ್ಥಿ ವಿಸರ್ಜಿಸುವ ವೇಳೆ ಕಾಲುಜಾರಿ ಸಂತೋಷ್ ಅವರು ನೀರು ಪಾಲಾಗಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಜತೆಯಲ್ಲಿದ್ದವರು ಮೊಸಳೆಯ ಭಯದಿಂದ ಅವರನ್ನು ರಕ್ಷಿಸಲು ಮುಂದಾಗಿಲ್ಲ ಎಂದು ಹೇಳಿದ್ದಾರೆ.

ಘಟನೆ ತಿಳಿದ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ, ಇನ್ನೂ ಅವರ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.