ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ | ಅಲಕನಂದಾ ನದಿ ಮೇಲ್ಸೇತುವೆ ಕುಸಿತ: ಕಾರ್ಮಿಕ ನಾಪತ್ತೆ

Published 2 ಆಗಸ್ಟ್ 2023, 10:24 IST
Last Updated 2 ಆಗಸ್ಟ್ 2023, 10:24 IST
ಅಕ್ಷರ ಗಾತ್ರ

ಗೋಪೇಶ್ವರ್‌(ಉತ್ತರಾಖಂಡ): ಅಲಕಾನಂದ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆ ಕುಸಿದ ಪರಿಣಾಮ ಕಾರ್ಮಿಕ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

ಈ ಘಟನೆಯಲ್ಲಿ ಇಬ್ಬರು ಕಾರ್ಮಿಕರು ನದಿಗೆ ಬಿದ್ದಿದ್ದರು. ಆದರೆ ಒಬ್ಬರು ಈಜಿ ದಡ ಸೇರಿದರೆ, ಮತ್ತೊಬ್ಬರು ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ನಾಪತ್ತೆಯಾಗಿರುವ ಕಾರ್ಮಿಕನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಚಮೋಲಿಯ ಪೊಲೀಸ್‌ ಅಧಿಕಾರಿ ಪ್ರಮೇಂದ್ರ ದೋಹಲ್ ಹೇಳಿದ್ದಾರೆ.

ಬ್ರಹ್ಮಕಪಲ್‌ ಬಳಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದು ಬದ್ರಿನಾಥ್‌ ಮಾಸ್ಟರ್‌ ಪ್ಲಾನ್‌ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದೋಹಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT