ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಗ್ರಾಮಕ್ಕೂ ಜೋಶಿಮಠದ ಸ್ಥಿತಿ ಎದುರಾಗಬಹುದು: ಸೆಲಾಂಗ್‌ ನಿವಾಸಿಗಳ ಅಳಲು

Last Updated 14 ಜನವರಿ 2023, 19:56 IST
ಅಕ್ಷರ ಗಾತ್ರ

ಸೆಲಾಂಗ್‌, ಜೋಶಿಮಠ: ‘ನಮ್ಮ ಗ್ರಾಮಕ್ಕೂ ಜೋಶಿಮಠದ ಪರಿಸ್ಥಿತಿ ಎದುರಾಗುವ ಅಪಾಯವಿದೆ’ ಎಂದು ಜೋಶಿಮಠದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಸೆಲಾಂಗ್‌ ಗ್ರಾಮದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

‘ಹಿಂದಿನ ಕೆಲ ತಿಂಗಳುಗಳಿಂದ ಗ್ರಾಮದ ಹಲವು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಭೂಮಿಯೂ ಬಿರುಕು ಬಿಟ್ಟಿದೆ. ಹೀಗಾಗಿ ಆತಂಕದಲ್ಲೇ ದಿನ ದೂಡುವಂತಾಗಿದೆ’ ಎಂದು ಅವರು ಹೇಳಿದ್ದಾರೆ.

‘ಎನ್‌ಟಿಪಿಸಿಯ ತಪೋವನ–ವಿಷ್ಣುಗಡ ಜಲ ವಿದ್ಯುತ್‌ ಯೋಜನೆಯಿಂದಾಗಿ ನಮಗೆ ಭೀತಿ ಎದುರಾಗಿದೆ. ಈ ಯೋಜನೆಯನ್ನು ಸಂಪರ್ಕಿಸುವ ಸುರಂಗ ಮಾರ್ಗವು ಗ್ರಾಮದ ಭೂ ಭಾಗದ ಕೆಳಗೆ ಹಾದು ಹೋಗಿದೆ. ಈ ಸುರಂಗದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಮೀಪ ಇದ್ದ ಹೋಟೆಲ್‌ವೊಂದು ಹೋದ ವರ್ಷದ ಜುಲೈನಲ್ಲಿ ಕುಸಿದಿತ್ತು. ಪೆಟ್ರೋಲ್‌ ಪಂಪ್‌ಗೆ ಭಾಗಶಃ ಹಾನಿಯಾಗಿತ್ತು’ ಎಂದು ಗ್ರಾಮದ ನಿವಾಸಿ ವಿಜೇಂದ್ರ ಲಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT