ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ಜಯಿನಿಯಲ್ಲಿ ಭಕ್ತರ ಮೇಲೆ ಹಲ್ಲೆ: ವ್ಯಾಪಾರಿ ವಿರುದ್ಧ ಪ್ರಕರಣ ದಾಖಲು

Published 31 ಮಾರ್ಚ್ 2024, 14:47 IST
Last Updated 31 ಮಾರ್ಚ್ 2024, 14:47 IST
ಅಕ್ಷರ ಗಾತ್ರ

ಉಜ್ಜಯಿನಿ: ತನ್ನ ಅಂಗಡಿಯಲ್ಲಿಯೇ ಪ್ರಸಾದ ಕೊಳ್ಳಬೇಕು ಎಂದು ಒತ್ತಾಯಿಸಿ, ಮುಂಬೈನ ಭಕ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉಜ್ಜಯಿನಿಯ ವ್ಯಾಪಾರಿಯೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಇಲ್ಲಿನ ಕಾಳಭೈರವ ದೇವಸ್ಥಾನದ ಎದುರು ನಡೆದ ಈ ಪ್ರಕರಣದ ಆರೋಪಿಯನ್ನು ರಾಜಾ ಭಾಟಿ ಎಂದು ಗುರುತಿಸಿರುವುದಾಗಿ ಪೊಲೀಸ್ ಸೂಪರಿಂಟೆಂಡೆಂಟ್‌ ಪ್ರದೀಪ್ ಶರ್ಮ ತಿಳಿಸಿದರು. 

ವಾಹನವನ್ನು ಅಂಗಡಿಯ ಮುಂದೆ ನಿಲ್ಲಿಸಿದ್ದರಿಂದ ತನ್ನ ಅಂಗಡಿಯಲ್ಲೇ ಪ್ರಸಾದ ತೆಗೆದುಕೊಳ್ಳಬೇಕು ಎಂದು ರಾಜಾ ಭಾಟಿ ಮುಂಬೈನಿಂದ ಬಂದಿದ್ದ ಮೂವರು ಭಕ್ತರನ್ನು ಒತ್ತಾಯಿಸಿದರು. ಇದು ಪರಸ್ಪರರ ನಡುವೆ ಹಲ್ಲೆಗೆ ಕಾರಣವಾಗಿ, ನಾಲ್ವರೂ ಗಾಯಗೊಂಡರು. ಮುಂಬೈನ ರಿಶಿ ಭಟ್ಟಾಚಾರ್ಯ ಎಂಬವರು ನೀಡಿದ ದೂರಿನ ಮೇಲೆ ಹಲ್ಲೆ, ಅಶ್ಲೀಲ ಪದಗಳ ಬಳಕೆ ಹಾಗೂ ಬೆದರಿಕೆ ಒಡ್ಡಿದ ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ಪ್ರದೀಪ್ ಶರ್ಮ ಮಾಹಿತಿ ನೀಡಿದರು. 

ದೇವಸ್ಥಾನದ ಹತ್ತಿರದಲ್ಲಿ ಅಕ್ರಮ ಅಂಗಡಿಗಳಿದ್ದು, ಆ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುವುದು ಎಂದು ಭೈರವಗಢದ ಪೊಲೀಸ್ ಠಾಣೆಯ ಉಸ್ತುವಾರಿ ಜಗದೀಶ್ ಗೋಯಲ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT