ನವದೆಹಲಿ: ರಾಷ್ಟ್ರ ರಾಜಧಾನಿ ‘ದೆಹಲಿ’ಗೆ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡುವಂತೆ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಭಾನುವಾರ ಒತ್ತಾಯಿಸಿದೆ.

ಈ ಕುರಿತು ದೆಹಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರಿಗೆ ಪತ್ರ ಬರೆದಿರುವ ವಿಎಚ್ಪಿ, ‘ರಾಷ್ಟ್ರರಾಜಧಾನಿ ಹೆಸರನ್ನು ಅದರ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಸಂಯೋಜಿಸಲು ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಬೇಕಿದೆ’ ಎಂದಿದೆ.

ಮುಂದುವರಿದು, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಇಂದ್ರಪ್ರಸ್ಥ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ವೆಂದು, ದೆಹಲಿ ರೈಲು ನಿಲ್ದಾಣವನ್ನು ‘ಇಂದ್ರಪ್ರಸ್ಥ ರೈಲು ನಿಲ್ದಾಣ’ವೆಂದು ಮತ್ತು ಶಹಜಹಾನಾಬಾದ್ ಅಭಿವೃದ್ಧಿ ಮಂಡಳಿಯನ್ನು ‘ಇಂದ್ರಪ್ರಸ್ಥ ಅಭಿವೃದ್ಧಿ ಮಂಡಳಿ’ ಎಂದು ಮರುನಾಮಕರಣ ಮಾಡಬೇಕೆಂದೂ ಆಗ್ರಹಿಸಿದೆ.

‘‘ದೆಹಲಿ’ ಎಂದು ಹೇಳಿದಾಗ ಎರಡು ಸಾವಿರ ವರ್ಷಗಳ ಇತಿಹಾಸವನ್ನು ಮಾತ್ರ ನಾವು ನೋಡುತ್ತೇವೆ. ಅದೇ ‘ಇಂದ್ರಪ್ರಸ್ಥ’ ಎಂದು ಹೇಳಿದಾಗ, ಐದು ಸಾವಿರ ವರ್ಷಗಳಷ್ಟು ಹಳೆಯದಾದ ಭವ್ಯ ಇತಿಹಾಸ ನಮ್ಮ ಕಣ್ಣ ಮುಂದೆ ಬರುತ್ತದೆ’ ಎಂದು ವಿಎಚ್ಪಿ ದೆಹಲಿ ಪ್ರಾಂತ ಕಾರ್ಯದರ್ಶಿ ಸುರೇಂದ್ರ ಕುಮಾರ್ ಗುಪ್ತಾ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.