ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಸಮಾಜದಲ್ಲಿನ ದುಡಿಯುವ ವರ್ಗವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದೊಂದಿಗೆ ವಿಶ್ವ ಹಿಂದೂ ಪರಿಷದ್ (ವಿಎಚ್ಪಿ) ಗ್ರಾಮ ಮಟ್ಟದ ಸಮಿತಿಗಳನ್ನು ರಚಿಸಲು ಮುಂದಾಗಿದೆ.

ಅದರಲ್ಲೂ ಜಮ್ಮ ಮತ್ತು ಕಾಶ್ಮೀರದ ಕೊಳಗೇರಿಗಳಲ್ಲಿ ವಾಸಿಸುವವರನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ ಎಂದು ಪರಿಷದ್ ಸೋಮವಾರ ಹೇಳಿದೆ.

‘ಗ್ರಾಮ ಮಟ್ಟದಲ್ಲಿ ಕೌಶಲಾಭಿವೃದ್ಧಿ ತರಬೇತಿ, ಕೊಳಗೇರಿಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಮತ್ತು ಅರಣ್ಯದಲ್ಲಿ ವಾಸಿಸುವವರ ಸಬಲೀಕರಣಕ್ಕೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ವಿಎಚ್ಪಿ ರಾಷ್ಟ್ರೀಯ ಕಾರ್ಯದರ್ಶಿ ದೇವ್ಜಿ ಭಾಯ್ ರಾವತ್ ತಿಳಿಸಿದರು.

‘ತಮ್ಮ ಕುಟುಂಬವನ್ನು ಸಲಹಲು ದುಡಿಮೆಯ ದಾರಿ ಕಂಡುಕೊಳ್ಳಲು ಅಶಿಕ್ಷಿತ ಯುವ ಸಮುದಾಯಕ್ಕೆ ಕೌಶಲಾಭಿವೃದ್ಧಿ ತರಬೇತಿ ಆಯೋಜಿಸಲಾಗುತ್ತಿದೆ. ಇದರೊಂದಿಗೆ ಹಿಂದೂಗಳಲ್ಲಿರುವ ಅಸ್ಪೃಶ್ಯತಾ ಮನೋಭಾವ ತೊಡೆದುಹಾಕಲು ಪರಿಷದ್ ಪ್ರಯತ್ನಿಸುತ್ತಿದೆ. ಸಾಮಾಜಿಕ ಸುಧಾರಕರಾದ ಡಾ. ಬಿ.ಆರ್.ಅಂಬೇಡ್ಕರ್, ಸಂತ ರವಿದಾಸ, ಮಹರ್ಷಿ ವಾಲ್ಮೀಕಿ, ಸಂತ ಕಬೀರ್ ಹಾಗೂ ರಾಮಾನುಜಾಚಾರ್ಯು ಅವರ ಜನ್ಮದಿನಾಚರಣೆಗಳನ್ನು ಆಚರಿಸಲಾಗುವುದು’ ಎಂದು ವಿವರಿಸಿದರು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುವಂತೆ ಜಮ್ಮು ಕಾಶ್ಮೀರದ ಹಿಂದೂಗಳಿಗೆ ದೇವ್ಜಿ ಭಾಯ್ ರಾವತ್ ಆಹ್ವಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.