ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌ಕೌಂಟರ್‌ನಲ್ಲಿ ಹತನಾದ ರೌಡಿ ಶೀಟರ್‌ ವಿಕಾಸ್‌ ದುಬೆ ಸಹಚರನ ಬಂಧನ

Published : 11 ಆಗಸ್ಟ್ 2020, 15:12 IST
ಫಾಲೋ ಮಾಡಿ
Comments

ಲಖನೌ: ಎನ್‌ಕೌಂಟರ್‌ನಲ್ಲಿ ಹತನಾದ ರೌಡಿ ಶೀಟರ್‌ ವಿಕಾಸ್‌ ದುಬೆ ಸಹಚರನನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಚಿತ್ರಕೂಟ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಕೊಂದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮತ್ತೋರ್ವ ಸಹಚರ ಶರಣಾದ ಕೆಲವೇ ದಿನಗಳ ನಂತರ ಈತನನ್ನು ಸೆರೆಹಿಡಿಯಲಾಗಿದೆ.

ದುಬೆಯ ಸೋದರಸಂಬಂಧಿ ಬಾಲ್ ಗೋವಿಂದ್ ದುಬೆ ಅಲಿಯಾಸ್ ಲಾಲು ಬಂಧನಕ್ಕೆ ಮಾಹಿತಿ ನೀಡಿದವರಿಗೆ ₹ 50,000 ನೀಡುವುದಾಗಿ ಘೋಷಿಸಿದ್ದರು. ಬಿಕ್ರು ಗ್ರಾಮದಲ್ಲಿ ನಡೆದ ಹೊಂಚು ದಾಳಿಯ ಪ್ರಮುಖ ಆರೋಪಿ ಎಂದು ಎಸ್‌ಟಿಎಫ್ ವಕ್ತಾರರು ತಿಳಿಸಿದ್ದಾರೆ.

ಲಾಲು, ಕಾನ್ಪುರದ ಚೌಬೆಪುರ ಪೊಲೀಸ್ ಠಾಣೆಯಲ್ಲಿ ಬಿಕ್ರು ಗ್ರಾಮದ ನಿವಾಸಿಯಾಗಿದ್ದು, ಸೋಮವಾರ ಚಿತ್ರಕೂಟ್‌ನ ಕಾರ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪರಿಕ್ರಾಮದಲ್ಲಿ ಬಂಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಲಾಲು ಬೇರೆ ವೇಷದಲ್ಲಿ ವಾಸಿಸುತ್ತಿದ್ದನು ಎಂಬ ಮಾಹಿತಿಯಿತ್ತು.ಕಳೆದ ತಿಂಗಳು ಪೊಲೀಸರ ಮೇಲೆ ದಾಳಿ ನಡೆಸಿ ಎಂಟು ಮಂದಿ ಪೊಲೀಸರ ಹತ್ಯೆಗೆ ಕಾರಣವಾದ ವಿಕಾಸ್ ದುಬೆ ಗ್ಯಾಂಗ್‌ನಲ್ಲಿದ್ದೆ ಎಂದು ವಿಚಾರಣೆ ವೇಳೆ ಆತ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಟಿಎಫ್) ವಿಶಾಲ್ ವಿಕ್ರಮ್ ಸಿಂಗ್ ಮಾತನಾಡಿ, ಲಾಲು ಆರಂಭದಲ್ಲಿ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ. ಆದರೆ ತೀವ್ರ ವಿಚಾರಣೆ ವೇಳೆ ತಾನು ಹೊಂಚುದಾಳಿಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದಿದ್ದಾರೆ.

ಜುಲೈ 2 ರಂದು ದುಬೆ ಮತ್ತು ಮತ್ತವನ ಸಹಚರರ ವಿರುದ್ಧ ದೂರು ನೀಡಿದ್ದ ಜಡೆಪುರ ಘಾಸಾ ನಿವಾಸಿ ರಾಹುಲ್ ತಿವಾರಿ ಅವರೊಂದಿಗೆ ಮೋಹಿನಿ ನಿವಾದ ಗ್ರಾಮದ ನಿವಾಸಿಯಾಗಿರುವ ತಮ್ಮ ಅಳಿಯ ವಿನೀತ್ ಶುಕ್ಲಾ ಭೂ ವಿವಾದವನ್ನು ಹೊಂದಿದ್ದಾರೆ ಎಂದು ಲಾಲು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ಆಗಸ್ಟ್ 8 ರಂದು ಚೌಬೆಪುರ ಪೊಲೀಸ್ ಠಾಣೆಗೆ ಆಗಮಿಸಿದ ಉಮಾಕಾಂತ್ ತಪ್ಪೊಪ್ಪಿಗೆ ಫಲಕವನ್ನು ಧರಿಸಿ ಪೊಲೀಸರಿಂದ ಕ್ಷಮೆ ಕೋರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನ ಪ್ರಾಣವನ್ನು ಉಳಿಸುವಂತೆ ಕುಟುಂಬದ ಸದಸ್ಯರು ತಮ್ಮಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಬಾಲ್ ಗೋವಿಂದ್ ಅಲಿಯಾಸ್ ಲಾಲು, ಈವರೆಗೆ ಬಂಧಿಸಲ್ಪಟ್ಟ ಅಥವಾ ಶರಣಾದ 10 ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಇನ್ನುಳಿದ ಐವರು ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ.

ಇದಕ್ಕೂ ಮುನ್ನ ದಯಾ ಶಂಕರ್ ಅಗ್ನಿಹೋತ್ರಿ, ಶ್ಯಾಮು ಬಾಜಪೈ, ಜಹಾನ್ ಯಾದವ್, ಶಶಿಕಾಂತ್, ಮೋನು ಮತ್ತು ಶಿವಂ ದುಬೆ ಸೇರಿದಂತೆ ವಿಕಾಸ್ ದುಬೆಯ ಹಲವಾರು ಸಹಚರರನ್ನು ಕಾನ್ಪುರ ಪೊಲೀಸರು ಬಂಧಿಸಿದ್ದರೆ, ಗೋಪಾಲ್ ಸೈನಿ ಎಂಬಾತ 10 ದಿನಗಳ ಹಿಂದೆಯಷ್ಟೇ ಕಾನ್ಪುರ್ ದೆಹತ್‌ನ ವಿಶೇಷ ನ್ಯಾಯಾಲಯದ ಮುಂದೆ ಶರಣಾಗಿದ್ದರು.

ಜುಲೈ 3 ರಿಂದ ವಿಕಾಸ್ ದುಬೆ, ಪ್ರಭಾತ್ ಮಿಶ್ರಾ, ಅಮರ್ ದುಬೆ, ಬೌನ್ ದುಬೆ, ಪ್ರೇಮ್ ಕುಮಾರ್ ಪಾಂಡೆ ಮತ್ತು ಅತುಲ್ ದುಬೆ ಎಂಬ ಆರು ಪ್ರಮುಖ ಆರೋಪಿಗಳನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT