ನವದೆಹಲಿ: ಒಂಬತ್ತು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗೊಂಡಿರುವ ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ(ಎಸ್ಐಆರ್) ಸಂಬಂಧಿಸಿ ಕರಡು ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಒಟ್ಟು 6.5 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.

ಎರಡನೇ ಹಂತದ ಎಸ್ಐಆರ್ ಕಳೆದ ಅಕ್ಟೋಬರ್ 27ರಂದು ಆರಂಭವಾಗಿತ್ತು. ಈ ಪ್ರಕ್ರಿಯೆ ಆರಂಭಕ್ಕೂ ಮುನ್ನ ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 50.90 ಕೋಟಿ ಮತದಾರರು ಇದ್ದರು. ಎಸ್ಐಆರ್ ಬಳಿಕ ಮತದಾರರ ಕರಡು ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ಮತದಾರರ ಸಂಖ್ಯೆ 44.40 ಕೋಟಿಗೆ ಇಳಿದಿದೆ.

‘ಕರಡು ಪಟ್ಟಿಯಿಂದ ಕೈಬಿಡಲಾದ ಹೆಸರಗಳನ್ನು ‘ಎಸ್ಎಸ್ಡಿ’ (ಗೈರು/ಸ್ಥಳಾಂತರಗೊಂಡವರು ಮತ್ತು ಮೃತಪಟ್ಟವರು) ಎಂದು ವರ್ಗೀಕರಿಸಿ, ಪ್ರತ್ಯೇಕವಾಗಿ ನಮೂದಿಸಲಾಗಿದೆ’ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತಾವ: ಇತರ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲಸಿರುವ ಪಶ್ಚಿಮ ಬಂಗಾಳದ ಮತದಾರರು ಎಸ್ಐಆರ್ಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವುದಕ್ಕೆ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ಕಚೇರಿಯು ಪರ್ಯಾಯ ವಿಧಾನ ಒಳಗೊಂಡ ಪ್ರಸ್ತಾವವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.

ವಿವಿಧ ರಾಜ್ಯಗಳಿಗೆ ವಲಸೆ ಹೋಗಿರುವ ಕಾರ್ಮಿಕರು, ಬೇರೆ ರಾಜ್ಯಗಳು/ದೇಶಗಳಲ್ಲಿ ತಾತ್ಕಾಲಿಕವಾಗಿ ನೆಲಸಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ನಿಗದಿತ ದಿನದಂದು ವಿಚಾರಣೆಗೆ ಖುದ್ದಾಗಿ ಹಾಜರಾಗಲು ಸಾಧ್ಯವಾಗುವುದಿಲ್ಲ. ಮತದಾರರ ಪಟ್ಟಿಯಿಂದ ಇಂಥವರ ಹೆಸರುಗಳನ್ನು ತೆಗೆದು ಹಾಕದಿರುವುದನ್ನು ಖಾತ್ರಿಪಡಿಸಲು ಪರ್ಯಾಯ ವಿಧಾನ ಸೂಚಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ವಿಡಿಯೊ ಕಾನ್ಫರೆನ್ಸ್ ಮೂಲಕ ಇಲ್ಲವೇ ಅವರು ಇರುವ ಸ್ಥಳದಲ್ಲಿನ ಮತಗಟ್ಟೆಗೆ ತೆರಳಿ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಬೇಕು ಎಂಬ ಸಲಹೆಯನ್ನು ಈ ಪ್ರಸ್ತಾವ ಒಳಗೊಂಡಿದೆ’ ಎಂದು ತಿಳಿಸಿದ್ದಾರೆ.

ಬಿಎಲ್ಒ ಸಾವು: ಒತ್ತಡ ಕಾರಣ–ಆರೋಪ ಕೋಲ್ಕತ್ತ(ಪಿಟಿಐ): ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೂತ್ ಮಟ್ಟದ ಅಧಿಕಾರಿ(ಬಿಎಲ್ಒ) ಸಂಪ್ರೀತಾ ಚೌಧರಿ ಸನ್ಯಾಲ್ ಬುಧವಾರ ಮೃತಪಟ್ಟಿದ್ದಾರೆ. ‘ಎಸ್ಐಆರ್ನಿಂದಾಗಿ ಕೆಲಸದ ಒತ್ತಡ ಹೆಚ್ಚಿದ್ದೇ ಸಂಪ್ರೀತಾ ಸಾವಿಗೆ ಕಾರಣ’ ಎಂದು ಅವರ ಕುಟುಂಬ ಆರೋಪಿಸಿದೆ. ಫುಲ್ಬರಿ ಪಕುರ್ತಲಾ ನಿವಾಸಿಯಾಗಿದ್ದ ಸಂಪ್ರೀತಾ ಅವರು ಇಂಗ್ಲಿಷ್ ಬಜಾರ್ ಪ್ರದೇಶದಲ್ಲಿ ಬಿಎಲ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ‘ಸಂಪ್ರೀತಾಗೆ ಕೆಲದಿನಗಳಿಂದ ಆರೋಗ್ಯ ಸರಿ ಇರಲಿಲ್ಲ. ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ಎಸ್ಐಆರ್ ಕಾರ್ಯವನ್ನು ಆಕೆ ಮುಂದುವರಿಸಿದ್ದಳು’ ಎಂದು ಅವರ ಪತಿ ಹೇಳಿದ್ದಾರೆ. ‘ಎಸ್ಐಆರ್ ಕಾರ್ಯಭಾರದಿಂದಾಗಿ ಒತ್ತಡಕ್ಕೆ ಒಳಗಾಗಿದ್ದರಿಂದ ಆಕೆಯ ಆರೋಗ್ಯ ಕ್ಷೀಣಿಸಿತು. ಬುಧವಾರ ಬೆಳಿಗ್ಗೆ ಆಕೆ ನಮ್ಮ ಮನೆಯಲ್ಲಿ ಮೃತಪಟ್ಟಳು’ ಎಂದೂ ಹೇಳಿದ್ದಾರೆ.

ಅಮರ್ತ್ಯ ಸೆನ್ಗೆ ನೋಟಿಸ್ ನಾಚಿಕೆಗೇಡಿನದು: ಟಿಎಂಸಿ

ಎಸ್ಐಆರ್ಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿರುವುದು ನಾಚಿಕೆಗೇಡಿನ ವಿಚಾರ ಎಂದು ಟಿಎಂಸಿ ಬುಧವಾರ ಟೀಕಿಸಿದೆ. ಈ ವಿಚಾರ ಮುಂದಿಟ್ಟುಕೊಂಡು ಆಯೋಗ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಟಿಎಂಸಿ‘ಆಯೋಗದ ಈ ನಡೆ ಪಶ್ಚಿಮ ಬಂಗಾಳ ವಿರೋಧಿ ಕ್ರಮ. ರಾಜ್ಯವನ್ನು ವಿಭಜಿಸುವುದು ಹಾಗೂ ಅವನತಿಗೆ ತಳ್ಳುವ ಕಾರ್ಯಸೂಚಿ ಭಾಗವಾಗಿ ಈ ರೀತಿ ನಡೆದುಕೊಳ್ಳಲಾಗುತ್ತಿದೆ’ ಎಂದು ಟೀಕಿಸಿದೆ. ‘ಸೆನ್ ಅವರು ಪ್ರಸ್ತುತ ವಿದೇಶದಲ್ಲಿದ್ದು ಇಲ್ಲಿನ ಬೋಲ್ಪುರದಲ್ಲಿ ಅವರ ಪೂರ್ವಿಕರ ಮನೆ ಇದೆ. ಅವರ ಸಂಬಂಧಿಕರಿಗೆ ಈ ನೋಟಿಸ್ ತಲುಪಿಸಲಾಗಿದೆ’ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ನೋಟಿಸ್ ಸ್ವೀಕರಿಸಿದ್ದೇನೆ. ಈ ಬಗ್ಗೆ ಸೆನ್ ಅವರಿಗೆ ಮಾಹಿತಿ ನೀಡುವೆ’ ಎಂದು ಅಮರ್ತ್ಯ ಸೆನ್ ಅವರ ಸಂಬಂಧಿಯೊಬ್ಬರು ಹೇಳಿದ್ದಾರೆ.

‘ಸೆನ್ ಅವರಿಗೆ ಹಲವು ಬಾರಿ ನೋಟಿಸ್ ಕಳುಹಿಸಲಾಗಿದೆ’ ಎಂಬ ಮಾತುಗಳನ್ನು ಪಶ್ಚಿಮ ಬಂಗಾಳ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ. ‘ಸೆನ್ ಅವರಿಗೆ ಒಂದು ಬಾರಿ ಮಾತ್ರ ನೋಟಿಸ್ ನೀಡಲಾಗಿದೆ. ಅವರು ಸಲ್ಲಿಸಿರುವ ಅರ್ಜಿಯಲ್ಲಿ ಕೆಲ ವ್ಯತ್ಯಾಸಗಳು ಕಂಡುಬಂದಿರುವ ಕಾರಣ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದಿದ್ದಾರೆ. ‘ಸೆನ್ ಅವರಿಗೆ 85 ವರ್ಷ ವಯಸ್ಸಾಗಿದೆ. ಹೀಗಾಗಿ ಸಂಬಂಧಪಟ್ಟ ಬಿಎಲ್ಒ ಅವರ ನಿವಾಸಕ್ಕೇ ತೆರಳಿ ಮಾಹಿತಿ ಪಡೆಯಲಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.