ನವದೆಹಲಿ: ಹೊಸ ಕಾಯ್ದೆಯಿಂದ ವಕ್ಫ್ ಆಸ್ತಿಯನ್ನು ನಿಯಂತ್ರಿಸುವ, ನಿರ್ವಹಿಸುವ ಮತ್ತು ಸೃಜಿಸುವ ಮುಸ್ಲಿಂ ಗುಂಪುಗಳ ಮತ್ತು ವ್ಯಕ್ತಿಗಳ ಅಧಿಕಾರವು ಬದಲಾಗದು. ಅದು ಹಾಗೆಯೇ ಉಳಿಯಲಿದೆ. ಆದರೆ, ವಕ್ಫ್ ಕಾಯ್ದೆ–2025ರ ಬಗ್ಗೆ ಕಾಂಗ್ರೆಸ್ ವದಂತಿಗಳನ್ನು ಹರಡುತ್ತಿದೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಆರೋಪಿಸಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೂಪೇಂದ್ರ ಯಾದವ್, ‘ನೂತನ ವಕ್ಫ್ ಕಾಯ್ದೆ ಐತಿಹಾಸಿಕ ಮೈಲಿಗಲ್ಲು. ಕಾಯ್ದೆ ತಿದ್ದುಪಡಿ ಆಗಿದ್ದು ಇದೇ ಮೊದಲೇನಲ್ಲ. ವಕ್ಫ್ ಕಾಯ್ದೆ ಅಷ್ಟು ಪವಿತ್ರವಾಗಿದ್ದರೆ 1956ರಿಂದ ಕಾಂಗ್ರೆಸ್ ಏಕೆ ಎಂಟು ಬಾರಿ ತಿದ್ದುಪಡಿ ಮಾಡಿತ್ತು? 2013ರ ತಿದ್ದುಪಡಿಯಲ್ಲಿ ವಕ್ಫ್ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಸೂಕ್ತ ನಿರ್ವಹಣೆಯ ಪ್ರಯತ್ನ ಆಗಿರಲಿಲ್ಲ. ಆ ತಿದ್ದುಪಡಿ ನಂತರ ವಕ್ಫ್ ಆಸ್ತಿಗಳು 10 ವರ್ಷದಲ್ಲಿ ದ್ವಿಗುಣ ಆಗಿದ್ದವು. ಹಾಗಾಗಿ ಅದನ್ನು ನಾವು ಸರಿಪಡಿಸಿದ್ದೇವೆ’ ಎಂದು ಯಾದವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.