ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಯನಾಡ್ ದುರಂತ: ಜೀವನದಿ ಚಾಲಿಯಾರ್‌ನಲ್ಲಿ ತೇಲಿ ಬರುತ್ತಿರುವ ಮೃತದೇಹಗಳು

Published 4 ಆಗಸ್ಟ್ 2024, 6:07 IST
Last Updated 4 ಆಗಸ್ಟ್ 2024, 6:07 IST
ಅಕ್ಷರ ಗಾತ್ರ

ವಯನಾಡ್‌: ಕೇರಳದ ಮೂರು ಜಿಲ್ಲೆಗಳ ಜೀವನದಿಯಾಗಿರುವ ‘ಚಾಲಿಯಾರ್’ ವಯನಾಡ್‌ ದುರಂತದ ಬಳಿಕ ವಿನಾಶ ಹೊತ್ತು ತರುವ ಸಂಕೇತವಾಗಿ ಬದಲಾಗಿದೆ.

ವಯನಾಡ್‌, ಮಲಪ್ಪುರಂ ಹಾಗೂ ಕೋಯಿಕ್ಕೋಡ್ ಜಿಲ್ಲೆಯ ಜನರ ಜೀವಾಳವಾಗಿದ್ದ ನದಿ ಈಗ ದುಃಖದ ಕಡಲಾಗಿ ಮಾರ್ಪಟ್ಟಿದೆ. ಪಶ್ಚಿಮ ಘಟ್ಟಗಳ ಎರಡು ಪ್ರಮುಖ ಉಪನದಿಗಳ ಸಂಗಮದಿಂದ ರೂಪುಗೊಳ್ಳುವ ಈ ನದಿಯಲ್ಲಿ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಶವಗಳು ತೇಲಿ ಬರುತ್ತಿವೆ.

ಹೀಗೆ ಬರುತ್ತಿರುವ ದೇಹಗಳನ್ನು ನೌಕಾಪಡೆ, ಪೊಲೀಸರು, ಅಗ್ನಿ ಶಾಮಕ, ಎನ್‌ಡಿಆರ್‌ಎಫ್‌ ಹಾಗೂ ಸ್ಥಳೀಯರು ಸೇರಿ ಹಲವು ರಕ್ಷಣಾ ತಂಡಗಳು ಹೊರತೆಗೆಯುತ್ತಿವೆ. ಶನಿವಾರ ಮತ್ತೆ ಮೂರು ದೇಹಗಳು ಹಾಗೂ 13 ದೇಹದ ಭಾಗಗಳನ್ನು ಹೊರತೆಗೆಯಲಾಗಿದೆ. ಅಲ್ಲಿಗೆ ಚಾಲಿಯಾರ್‌ ನದಿಯಿಂದ ಹೊರತೆಗೆಯಲಾದ ದೇಹಗಳ ಸಂಖ್ಯೆ 73ಕ್ಕೆ ಹಾಗೂ ದೇಹದ ಭಾಗಗಳ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಎರಡರ ಒಟ್ಟು ಮೊತ್ತ 205.

ಈ ಪೈಕಿ 37 ಪುರುಷರು, 29 ಮಹಿಳೆಯರು, 3 ಬಾಲಕರು ಹಾಗೂ 4 ಬಾಲಕಿಯರ ಮೃತದೇಹಗಳಿವೆ ಎಂದು ಮಲಪ್ಪುರಂ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪೈಕಿ 198 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮುಂದಿನ ಪ್ರಕ್ರಿಯೆಗೆ 195 ದೇಹಗಳನ್ನು ವಯನಾಡ್‌ಗೆ ರವಾನಿಸಲಾಗಿದೆ.

ಚಾಲಿಯಾರ್ ನದಿಯ 40 ಕಿ.ಮಿ ವ್ಯಾಪ್ತಿಯಲ್ಲಿ ಶೋಧ ಕಾರ್ಯಚರಣೆ ಮುಂದುವರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT