ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಅತ್ಯಂತ ಹೆಚ್ಚಿನ ತಾಪಮಾನದ ವರ್ಷ

Published 9 ಜನವರಿ 2024, 20:54 IST
Last Updated 9 ಜನವರಿ 2024, 20:54 IST
ಅಕ್ಷರ ಗಾತ್ರ

ನವದೆಹಲಿ: 2023ನೆಯ ಇಸವಿಯು ವಿಶ್ವ ಕಂಡ ಅತ್ಯಂತ ಹೆಚ್ಚಿನ ತಾಪಮಾನದ ವರ್ಷ ಎಂಬುದನ್ನು ಯುರೋಪಿನ ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

2023ನೆಯ ಇಸವಿಯಲ್ಲಿ ವಿಶ್ವದ ಸರಾಸರಿ ತಾಪಮಾನವು 14.98 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು 1991ರಿಂದ 2020ರವರೆಗಿನ ಸರಾಸರಿ ತಾಪಮಾನಕ್ಕಿಂತ 0.6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು. ಹಾಗೂ ಈ ಹಿಂದಿನ ಅತ್ಯಂತ ಹೆಚ್ಚಿನ ತಾಪಮಾನದ ವರ್ಷ ಎಂದು ಪರಿಗಣಿತವಾಗಿದ್ದ 2016ನೆಯ ಇಸವಿಯ ಸರಾಸರಿ ತಾಪಮಾನಕ್ಕಿಂತ 0.17 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು.

ಖೇದದ ಸಂಗತಿಯೆಂದರೆ, 2023ರಲ್ಲಿ ಪ್ರತಿದಿನದ ಸರಾಸರಿ ತಾಪಮಾನವು ಕೈಗಾರಿಕಾ ಕ್ರಾಂತಿಗೂ ಮೊದಲಿನ ಕಾಲಘಟ್ಟದ ತಾಪಮಾನಕ್ಕಿಂತ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿತ್ತು. ನವೆಂಬರ್‌ನಲ್ಲಿ ಎರಡು ದಿನ ತಾಪಮಾನವು ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿತ್ತು.

‘2023ರಲ್ಲಿ ತಾಪಮಾನವು ಕಳೆದ ಒಂದು ಲಕ್ಷ ವರ್ಷಗಳ ಯಾವುದೇ ಕಾಲಘಟ್ಟದ ತಾಪಮಾನಕ್ಕಿಂತ ಹೆಚ್ಚಾಗಿದ್ದ ಸಾಧ್ಯತೆ ಇದೆ’ ಎಂದು ಐರೋಪ್ಯ ಮಧ್ಯಮ ಅವಧಿ ಹವಾಮಾನ ಮುನ್ಸೂಚನೆ ಕೇಂದ್ರದ ಕೋಪ‍ರ್ನಿಕಸ್ ಹವಾಮಾನ ಬದಲಾವಣೆ ಸೇವೆ ವಿಭಾಗದ ಉಪ ಮುಖ್ಯಸ್ಥೆ ಸಮಂತಾ ಬರ್ಗಸ್ ಹೇಳಿದ್ದಾರೆ.

2023ರಲ್ಲಿ ಯುರೋಪ್, ಅಮೆರಿಕ ಮತ್ತು ಚೀನಾದಲ್ಲಿ ಹಿಂದೆಂದೂ ಕಾಣದಂತಹ ಬಿಸಿಗಾಳಿ ಸೃಷ್ಟಿಯಾಗಿತ್ತು, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಚಳಿಗಾಲದಲ್ಲಿ ತಾಪಮಾನವು ದಾಖಲೆಯ ಮಟ್ಟಕ್ಕೆ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT