ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಂಗ್ಲಾ' ಆಗಲಿದೆ ಪಶ್ಚಿಮ ಬಂಗಾಳ: ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಕೇಂದ್ರ ಗೃಹ ಇಲಾಖೆಗ ಪ್ರಸ್ತಾವ
Last Updated 26 ಜುಲೈ 2018, 9:52 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳವನ್ನು ಬಂಗಾಳಿಯಲ್ಲಿ ‘ಬಂಗ್ಲಾ’ ಎಂದು, ಹಿಂದಿಯಲ್ಲಿ ‘ಬಂಗಾಲ್‌’ ಹಾಗೂಆಂಗ್ಲ ಭಾಷೆಯಲ್ಲಿ ‘ಬೆಂಗಾಲ್‌’ (Bengal) ಎಂದು ಬದಲಾಯಿಸಲು ಪಶ್ಚಿಮ ಬಂಗಾಳದ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ.

’ಬಂಗ್ಲಾ’ ಎಂದು ರಾಜ್ಯದ ಹೆಸರು ಬದಲಿಸುವ ಪ್ರಸ್ತಾವನೆ ಕೇಂದ್ರ ಗೃಹ ಸಚಿವಾಲಯಕ್ಕೆ ತಲುಪಲಿದ್ದು, ಸಚಿವಾಲಯ ಹಸಿರು ನಿಶಾನೆ ತೋರಿದಲ್ಲಿ ಮಾತ್ರವೇ ಹೆಸರು ಬದಲಾವಣೆ ಅಂತಿಮವಾಗಲಿದೆ.

ಆಂಗ್ಲ ಭಾಷೆಯಲ್ಲಿ ಬೆಂಗಾಲ್‌ ಮತ್ತು ಬೆಂಗಾಲಿಯಲ್ಲಿ ’ಬಂಗ್ಲಾ’ ಎಂದು ಹೆಸರು ಬದಲಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಈ ಹಿಂದೆ ಕೇಂದ್ರ ಸರ್ಕಾರ ಸಮ್ಮತಿಸಿರಲಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬೆಂಗಾಲಿ, ಇಂಗ್ಲಿಷ್‌ ಹಾಗೂ ಹಿಂದಿ ಮೂರೂ ಭಾಷೆಗಳಲ್ಲಿ ಹೆಸರು ಬದಲಿಸಲು ಮತ್ತೊಂದು ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು ಎಂದು ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹೇಳಿದ್ದರು.

2011ರಲ್ಲಿ ತೃಣಮೂಲ ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ರಾಜ್ಯದ ಹೆಸರನ್ನು ’ಪಶ್ಚಿಮ್ ಬಂಗೊ’ ಎಂದು ಬದಲಿಸಲು ನಿರ್ಧರಿಸಲಾಗಿತ್ತು. ಆದರೆ ಇದನ್ನು ಕೇಂದ್ರ ತಡೆಹಿಡಿದಿತ್ತು. ಆನಂತರ ’ಬೆಂಗಾಲ್‌’ ಎಂದು ಹೆಸರು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.

ದೇಶದ ಎಲ್ಲ ರಾಜ್ಯಗಳ ಸಭೆಗಳು ನಡೆಯುವಾಗ ಸಿದ್ಧಪಡಿಸುವ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ(west Bengal)ದ ಹೆಸರು ಕೊನೆಯ ಸ್ಥಾನದಲ್ಲಿರುತ್ತದೆ. ಇಂಗ್ಲಿಷ್‌ ಭಾಷೆಯ ಅಕ್ಷರಗಳ ಕ್ರಮದಲ್ಲಿ ಪಟ್ಟಿ ಸಿದ್ಧಪಡಿಸುವುದರಿಂದ ಪಶ್ಚಿಮ ಬಂಗಾಳ ಸದಾ ಅಡಿಯಲ್ಲಿರುತ್ತದೆ. ಈ ಕಾರಣದಿಂದಾಗಿ ರಾಜ್ಯದ ಹೆಸರು ಬದಲಿಸಲು ಒಮ್ಮತದಿಂದನಿರ್ಣಯ ಅಂಗೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT